Friday, May 3, 2024
Homeಅಪರಾಧಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ!

ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ!

spot_img
- Advertisement -
- Advertisement -

ಮುಂಬೈ:  ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿ ಬಿ ವಶದಲ್ಲಿರುವ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಮರ್ಚೆಂಟ್ ಮತ್ತಿತರ ಆರು ಮಂದಿಯನ್ನು ಮುಂಬೈಯ ಸ್ಥಳೀಯ ಕೋರ್ಟ್ ಗುರುವಾರದಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಪ್ರಕರಣದಲ್ಲಿ ಆರ್ಯನ್ ಸೇರಿದಂತೆ ಇದುವರೆಗೂ 18 ಮಂದಿಯನ್ನು ಬಂಧಿಸಲಾಗಿದ್ದು, ಆರ್ಯನ್ ಜೊತೆ ಸಿಕ್ಕಿಬಿದ್ದಿದ್ದ 7 ಮಂದಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಈಗಾಗಲೇ 3 ದಿನ ಎನ್ ಸಿ ಬಿ ವಶಕ್ಕೆ ನೀಡಿದ್ದ ಕಿಲ್ಲಾ ನ್ಯಾಯಾಲಯ, ಈ ಬಾರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೇ ಆರ್ಯನ್ ಪರ ವಕೀಲರು ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿತು.ಮಧ್ಯಂತರ ಜಾಮೀನು ಅರ್ಜಿಗೆ ಎನ್ ಸಿ ಬಿ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ವಿಚಾರಣೆ ನಡೆದಿದ್ದು, ಈ ಕುರಿತ ತೀರ್ಪನ್ನು ನಾಳೆ ಪ್ರಕಟಿಸುವುದಾಗಿ ನ್ಯಾಯಾಧೀಶರು ಘೋಷಿಸಿದರು.

- Advertisement -
spot_img

Latest News

error: Content is protected !!