Thursday, May 16, 2024
Homeಕರಾವಳಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪ ಕಾರ್ಯದರ್ಶಿಯಾಗಿ ಅರುಣ್ ಫುರ್ಟಾಡೊ ನೇಮಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪ ಕಾರ್ಯದರ್ಶಿಯಾಗಿ ಅರುಣ್ ಫುರ್ಟಾಡೊ ನೇಮಕ

spot_img
- Advertisement -
- Advertisement -

ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪ ಕಾರ್ಯದರ್ಶಿ (ಆಡಳಿತ) ಆಗಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಮೂಲದ ಅರುಣ್ ಫುರ್ಟಾಡೊ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ) ಅಧೀನ ಕಾರ್ಯದರ್ಶಿ ಕೆ.ವಿ ಅಶೋಕ ಅವರು ಆದೇಶ ಹೊರಡಿಸಿದ್ದಾರೆ. ಅರುಣ್ ಫುರ್ಟಾಡೊ, ಹೆಚ್ಚುವರಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ (ಪ್ರಸ್ತುತ ನಿರ್ದೇಶಕರು, ಡಾ ಬಾಬು ಜಗಜೀವನರಾಮ್ ಸಂಶೋಧನಾ ಕೇಂದ್ರ, ಬೆಂಗಳೂರು) ಅವರನ್ನು ಮುಖ್ಯಮಂತ್ರಿಯವರ ಅಧಿಕಾರಾವಧಿ ಅಥವಾ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಯಾಗಿ ಹುದ್ದೆಗೆ ನಿಯೋಜನೆ ಮಾಡಿ ತಕ್ಷಣವೇ ಜಾರಿಗೆ ಬರುವಂತೆ ನೇಮಿಸಿ ಆದೇಶ ಹೊರಡಿಸಲಾಗಿದೆ.

- Advertisement -
spot_img

Latest News

error: Content is protected !!