Wednesday, September 18, 2024
HomeUncategorizedಶಿಕ್ಷಕರ ನೇಮಕಾತಿಯಲ್ಲಿ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಅವಕಾಶ: ಬಿ.ಎಡ್ ವಿದ್ಯಾರ್ಥಿಗಳ ಬದುಕು ನಾಯಿಪಾಡು !

ಶಿಕ್ಷಕರ ನೇಮಕಾತಿಯಲ್ಲಿ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಅವಕಾಶ: ಬಿ.ಎಡ್ ವಿದ್ಯಾರ್ಥಿಗಳ ಬದುಕು ನಾಯಿಪಾಡು !

spot_img
- Advertisement -
- Advertisement -

ಮಂಗಳೂರು: ಆರು, ಏಳು ಮತ್ತು ಎಂಟನೇ ತರಗತಿಗಳ ಸರಕಾರಿ ಶಿಕ್ಷಕರ ನೇಮಕಾತಿಯಲ್ಲಿ ಬಿಕಾಂ ಪದವೀಧರರು, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪದವಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿರುವ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ಕೇಳಿಬರುತ್ತಿದೆ.

ಕೆಲದಿನಗಳ ಹಿಂದೆ ಖಾಸಗಿ ಪತ್ರಿಕೆಯೊಂದು ಈ ಕುರಿತು ವರದಿ ಮಾಡಿತ್ತು. ಕೊರೋನಾ ಲಾಕ್ ಡೌನ್ ನಿಂದಾಗಿ ಶಿಕ್ಷಣ ಕ್ಷೇತ್ರವೇ ಮಖಾಡೆ ಮಲಗಿರುವಾಗ ಸರಕಾರಿ ನೇಮಕಾತಿಯಲ್ಲಿ ಬಿ.ಎಡ್ ಶಿಕ್ಷಣ ಪಡೆದಿರುವ ಅಭ್ಯಥಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಬಿಕಾಂ ಪದವೀಧರರು, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಅಭ್ಯರ್ಥಿಗಳ ಬಗ್ಗೆ ಶಿಕ್ಷಣ ಸಚಿವರಿಗೆ ಇರುವ ಮೃದು ಧೋರಣೆ ಬಿ.ಎಡ್ ಪದವೀಧರರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಶಿಕ್ಷಣ ಕ್ಷೆತ್ರವನ್ನು ವೃತ್ತಿಯಲ್ಲಿ ಸ್ವೀಕರಿಸಲು ಪದವಿ ಶಿಕ್ಷಣದ ನಂತರ ಬಿ.ಎಡ್ ಪದವಿಗಾಗಿ 3 ವರ್ಷ ಸವೆಸಿರುವ ಅದೆಷ್ಟೋ ಬಡ ಜೀವಗಳು ಉದ್ಯೋಗಕ್ಕಾಗಿ ಎದುರು ನೋಡುತ್ತಿದ್ದರು. ಬಿ.ಎಡ್ ಶೈಕ್ಷಣಿಕವಾಗಿ 2 ವರ್ಷವಾದರೂ, ಕೋರ್ಸ್ ಶುರುವಾಗುವುದು ಅರ್ಧ ಶೈಕ್ಷಣಿಕ ವರ್ಷ ಮುಗಿದ ನಂತರ (ನವೆಂಬರ್ ತಿಂಗಳಿನಲ್ಲಿ) ಮತ್ತು ಕೋರ್ಸ್ ಕೊನೆಯಾಗುವುದು ಜನವರಿ ತಿಂಗಳಿನಲ್ಲಿ. ಶಿಕ್ಷಣ ಪಡೆದ ನಂತರ ಉದ್ಯೋಗಕ್ಕಾಗಿ ಹೊಸ ಶೈಕ್ಷಣಿಕ ವರ್ಷದ (ಜೂನ್)ವರೆಗೆ ಕಾಯಲೇಬೇಕು. ಬಿ.ಎಡ್ ಕಲಿತ ನಂತರ ಉದ್ಯೋಗಕ್ಕೆಂದು ಬಂದಾಗ ವಿದ್ಯಾರ್ಥಿಗಳ ಪಡುವ ಕಷ್ಟ ಅಷ್ಟಿಷ್ಟಲ್ಲ. ಕೆಲ ಪದವೀಧರರಿಗೆ ನಗರದ ಶಾಲೆಗಳು ಉದ್ಯೋಗ ನೀಡಿದರೆ ಇನ್ನು ಅದೆಷ್ಟೋ ಮಂದಿ ಸೇವಾ ಅಭದ್ರತೆಯ ನಡುವೆಯೂ ಗ್ರಾಮೀಣ ಭಾಗದ ಖಾಸಗಿ ಶಾಲೆಯಲ್ಲಿ ಕಡಿಮೆ ಸಂಬಳಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಸರಕಾರಿ ಶಾಲೆಗಳಲ್ಲಿ ಗೌರವ ಶಿಕ್ಷಕರಾಗಿ ದುಡಿಯುತ್ತಿರುವವರ ಕಷ್ಟ ಹೇಳತೀರದು. ಇನ್ನು ಹಲವರು ತಮ್ಮ ಸಾಮರ್ಥ್ಯಕ್ಕೆ ಸರಿಯಾದ ಉದ್ಯೋಗ ಸಿಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಪುರಾಣಗಳಿಂದಲೂ ಗುರುವಿಗೆ ದೇವರ ಸ್ಥಾನವಿದೆ. ಆದರೆ ಶಿಕ್ಷಣವೂ ವ್ಯಾಪಾರೀಕರಣವಾಗಿರುವ ಈ ಕಾಲಘಟದ್ದಲ್ಲಿ ಅತಿ ಶೋಷಣೆಗೆ ಮತ್ತು ಅವಮಾನಕ್ಕೆ ಒಳಾಗುವ ವೃತ್ತಿಯಲ್ಲಿ ಶಿಕ್ಷಕ ವೃತ್ತಿಯೂ ಒಂದು. ಬಿಕಾಂ ಮತ್ತು ಇಂಜಿನಿಯರಿಂಗ್ ಪಧವೀಧರರಿಗೆ ಅದೆಷ್ಟೋ ಕಾರ್ಪೊರೇಟ್ ಕಂಪೆನಿಗಳು ಅಭ್ಯರ್ಥಿಗಳ ಮೌಲ್ಯಕ್ಕಾನುಸಾರವಾಗಿ ಉದ್ಯೋಗ ಮತ್ತು ಉತ್ತಮ ವೇತನ ನೀಡುತ್ತಿರುವ ಈ ಸಮಯದಲ್ಲೂ ಅವರನ್ನು ವಿನಾಕಾರಣ ಶಿಕ್ಷಣ ಕ್ಷೆತ್ರಕ್ಕೆ ಎಳೆತಂದು ಸಂಕಷ್ಟದಲ್ಲಿರುವ ಬಡ ಬಿ.ಎಡ್ ವಿದ್ಯಾರ್ಥಿಗಳ ಹೊಟ್ಟೆಗೆ ಹೊಡೆಯುವ ಕೆಲಸವಾಗುತ್ತಿದೆ ಎನ್ನುವುದು ಬಿ.ಎಡ್ ಪದವೀಧರರ ವಾದ.

ಒಂದು ವೇಳೆ ಶಿಕ್ಷಕರ ನೇಮಕಾತಿಯಲ್ಲಿ ತಿದ್ದುಪಡಿಯನ್ನು ತರುವುದೇ ಆದಲ್ಲಿ ಈಗಾಗಲೇ ರಾಜ್ಯದಲ್ಲಿರುವ ಲಕ್ಷಾಂತರ ಖಾಸಗಿ ಶಿಕ್ಷಕರ ಭವಿಷ್ಯವೇನು? ಹಾಗಾಗಿ ಸಚಿವರ ನಿಲುವು ಶಿಕ್ಷಕರ ಬದುಕಿಗೆ ಮಾರಕವಾಗದಿರಲಿ ಎನ್ನುವುದು ನಮ್ಮ ಆಶಯ.

ಲೇಖನ: ಕಾವ್ಯ ಪಿ.
ಬಿ.ಎಡ್ ಪದವೀಧರೆ
ಮಂಗಳೂರು

- Advertisement -
spot_img

Latest News

error: Content is protected !!