Monday, June 8, 2026
Homeಅಪರಾಧಅಕ್ರಮ ಗೋಸಾಗಾಟ ಮಾಡುತ್ತಿದ್ದ ಓರ್ವನ ಬಂಧನ; ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಅಕ್ರಮ ಗೋಸಾಗಾಟ ಮಾಡುತ್ತಿದ್ದ ಓರ್ವನ ಬಂಧನ; ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ದೂರುದಾರರಾದ ವೇಣೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಶ್ರೀ ಶೈಲ ಡಿ ಮುಗೋಡು ಅವರು  ಠಾಣಾ ಸಿಬ್ಬಂದಿಗಳೊಂದಿಗೆ 08-12-2023 ರಂದು  ರೌಂಡ್ಸ್ ಕರ್ತವ್ಯದಲ್ಲಿರುವ ಸಮಯದಲ್ಲಿ, ಹೊಸಂಗಡಿ ಕಡೆಯಿಂದ ವೇಣೂರು ಕಡೆಗೆ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ವಾಹನ ಸಮೇತವಾಗಿ ಬಂಧಿಸಲಾಗಿದೆ.

ಬಂಧಿತ ಆರೋಪಿ ಹಾಸನ ಜಿಲ್ಲೆಯ ಅಂತನಹಳ್ಳಿ ಗ್ರಾಮದ ಬಾಳ ಗಂಜಿ ಹಿರಿಸಾವೆ ಹೋಬಳಿಯ ರಂಗೇ ಗೌಡ ಏ ಆರ್‌. 

ವೇಣೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಶ್ರೀ ಶೈಲ ಡಿ ಮುಗೋಡು ಹಾಗೂ ಅವರ ತಂಡ ಕರಿಮಣೇಲು ಗ್ರಾಮದ ವೇಣೂರು ಚರ್ಚ್ ಬಳಿ ಮೂಡಬಿದ್ರೆ–ವೇಣೂರು ಸಾರ್ವಜನಿಕ ಡಾಮರು ರಸ್ತೆಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಿಚಾರವನ್ನು ತಿಳಿದು, ಆ ರಸ್ತೆಯಿಂದ ಬರುತ್ತಿದ್ದ ವಾಹನವನ್ನು ತಪಾಸಣೆ ಮಾಡುತ್ತಿದ್ದರು. ಸುಮಾರು 10.15 ಗಂಟೆಯ ವೇಳೆಗೆ ಹೊಸಂಗಡಿ ಕಡೆಯಿಂದ ಒಂದು ಪಿಕ್ ಅಪ್ ವಾಹನ ಬರುತ್ತಿರುವುದನ್ನು ಕಂಡು  ಸಿಬ್ಬಂದಿಯವರ ಸಹಾಯದಿಂದ ವಾಹನ ನಿಲ್ಲಿಸಿ ತಪಾಸಣೆ ನಡೆಸಿದಾಗ ಆರೋಪಿಯು ಅಕ್ರಮವಾಗಿ ಎರಡು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಇನ್ನು ಪಂಚರುಗಳ ಸಮಕ್ಷಮ ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಕಪ್ಪು ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ಎರಡು ಜರ್ಸಿ ದನಗಳು ಮತ್ತು ಸಾಗಾಟಕ್ಕೆ ಉಪಯೋಗಿಸಿದ ಕೆ ಎ 13.ಸಿ.4395 ಪಿಕ ಅಪ್ ವಾಹನವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಸ್ವಾದೀನ ಪಡಿಸಿದ ಜಾನುವಾರುಗಳ ಒಟ್ಟು ಮೌಲ್ಯ ಒಟ್ಟು ರೂ 40,000 ಹಾಗೂ ಪಿಕ್ ಅಪ್ ಮೌಲ್ಯ 2,00,000 ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

- Advertisement -

Latest News

error: Content is protected !!