Wednesday, June 26, 2024
Homeತಾಜಾ ಸುದ್ದಿಮಂಗಳೂರು: ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ಪ್ರಕ್ರಿಯೆ ಒಪ್ಪುವಂಥದ್ದಲ್ಲ: ಸೂಕ್ತ ತನಿಖೆ ನಡೆದು ನೈಜ ಹಂತಕರ...

ಮಂಗಳೂರು: ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ಪ್ರಕ್ರಿಯೆ ಒಪ್ಪುವಂಥದ್ದಲ್ಲ: ಸೂಕ್ತ ತನಿಖೆ ನಡೆದು ನೈಜ ಹಂತಕರ ಬಂಧನವಾಗಲಿ: ಎಸ್‌ಡಿಪಿಐ ಆಗ್ರಹ

spot_img
- Advertisement -
- Advertisement -

ಮಂಗಳೂರು: ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ಪ್ರಕ್ರಿಯೆ ಒಪ್ಪುವಂಥದ್ದಲ್ಲ. ಬೇರೆ ಬೇರೆ ಆಯಾಮಗಳಲ್ಲಿ ಸ್ಥಳೀಯವಾಗಿ ಚರ್ಚೆ ಇದೆ.  ಅವರ ತಂದೆ, ಕಾರ್ಯಕರ್ತರು ಹೇಳುವ ಆಯಾಮದಲ್ಲೂ ತನಿಖೆಯಾಗಲಿ.‌ ಯಾರನ್ನೋ ಸಮಾಧಾನ ಪಡಿಸಲು ಕೆಲವರನ್ನು ತೋರಿಸುವುದು ಸರಿಯಲ್ಲ. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದು ನೈಜ ಹಂತಕರ ಬಂಧನವಾಗಲಿ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಎಸ್ ಡಿಪಿಐ ಪಕ್ಷದಿಂದ ಸುದ್ದಿಗೋಷ್ಟಿ ಆಯೋಜಿಸಿದ್ದು, ಅದರಲ್ಲಿ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಮಾತನಾಡಿದರು.‌ ದ.ಕ ಜಿಲ್ಲೆಯಲ್ಲಿ ನಡೆದ ಮೂರೂ ಕೊಲೆಯನ್ನು ಎಸ್ಡಿಪಿಐ ಪಕ್ಷ ಖಂಡಿಸುತ್ತದೆ.‌ ಸದ್ಯ ಮೂರು ಕೊಲೆ ಆರೋಪಿಗಳ ಬಂಧನ ಆಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನಾವು ಕೋರುತ್ತೇವೆ. ಆದ್ರೆ ಇಲ್ಲಿ ಹತ್ಯೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ. ಒಂದು ಪ್ರದೇಶದಲ್ಲಿ ಎರಡು ಕೊಲೆ ಆದರೂ ಒಂದು ಕೊಲೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇನ್ನೊಂದರ ಬಗ್ಗೆ ಕ್ಷುಲ್ಲಕ ಕಾರಣಕ್ಕಾಗಿ ಎಂದು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -
spot_img

Latest News

error: Content is protected !!