Saturday, June 6, 2026
Homeಅಪರಾಧ17 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

17 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಬಂಟ್ವಾಳ:  ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ :189/2007 ಕಲಂ : 504,506,323,324 ಜೊತೆಗೆ 34 ಐಪಿಸಿ ಪ್ರಕರಣದ ಆರೋಪಿಯಾಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಬುಸಾಲಿ (41). ಆರೋಪಿಯು ಕಂಚಿಲ ಮನೆ ಕುಕ್ಕಾಜೆ ಮಂಚಿ ಗ್ರಾಮ ಬಂಟ್ವಾಳ ತಾಲೂಕಿನಲ್ಲಿ ವಾಸವಿದ್ದನು. ಸುಮಾರು 17 ವರ್ಷಗಳಿಂದ  ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾತನನ್ನು, 2024  ಮಾ. 29 ಶುಕ್ರವಾರದಂದು ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಿಕರಾದ ಶ್ರೀ ರಾಮಕೃಷ್ಣ ರವರು ಮತ್ತು ಹೆಚ್ ಸಿ 1023 ರಾಜೇಶ್ ಎಸ್,  ಹೆಚ್ ಸಿ 1028 ಗಣೇಶ್ ಏನ್ ರವರುಗಳ ತಂಡ, ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

- Advertisement -

Latest News

error: Content is protected !!