ಬೆಳ್ತಂಗಡಿ; ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕು ಮಲವಂತಿಕೆ ಗ್ರಾಮದ ಏಳನೀರು ಎಂಬಲ್ಲಿ ನಡೆದಿದೆ.ಯತೀಂದ್ರ (24) , ಉಸ್ಮಾನ್ (36), ಅರವಿಂದ (30), ಆರೀಫ್ (27) ಬಂಧಿತ ಆರೋಪಿಗಳು.
ಆರೋಪಿಗಳು ಮಲವಂತಿಕೆ ಗ್ರಾಮದ ಏಳನೀರಿಗೆ ಹೋಗುವ ರಸ್ತೆಯ ಮುಖಾಂತರ 5 ಜಾನುವಾರುಗಳನ್ನು ಯಾವುದೇ ಪರವಾನಗೆ ಇಲ್ಲದೇ ಎರಡು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮುರಳಿಧರನಾಯ್ಕ ಕೆ ಜಿ , ಪೊಲೀಸ್ ಉಪನಿರೀಕ್ಷಕರು (ಕಾ&ಸು) ಬೆಳ್ತಂಗಡಿ ಪೊಲೀಸ್ ಠಾಣೆ ಬೆಳ್ತಂಗಡಿರವರು ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ಮಲವಂತಿಕೆ ಗ್ರಾಮದ ಕಜಕ್ಕೆ ಎಂಬಲ್ಲಿಗೆ ತೆರಳಿ KA-70-5197 ಪಿಕಪ್ ವಾಹನವನ್ನು ಮತ್ತು ಇನ್ನೊಂದು KA-18-B-4918 ಪಿಕಪ್ ವಾಹನವನ್ನು ತಡೆದು ವಾಹನದಲ್ಲಿದ್ದ ಪರಿಶೀಲಿಸಲಾಗಿ, KA-70-5197 ಪಿಕಪ್ ವಾಹನದಲ್ಲಿ 03 ಜಾನುವಾರುಗಳು ಮತ್ತು KA-18-B-4918 ಪಿಕಪ್ ವಾಹನದಲ್ಲಿ 02 ಜಾನುವಾರುಗಳು ಹಿಂಸಾತ್ಮಕವಾಗಿ ತುಂಬಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಾಹನದಲ್ಲಿದ್ದ ಆಪಾದಿತರುಗಳ ಬಳಿ ವಿಚಾರಿಸಲಾಗಿ ಅವರುಗಳು ಯಾವುದೇ ಪರವಾನಿಗೆ ಇಲ್ಲದೇ ಜಾನುವಾರುಗಳನ್ನು ಮಾಂಸಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಮುಂದಿನ ಕಾನೂನುಕ್ರಮಕ್ಕಾಗಿ 02 ಪಿಕಪ್ ವಾಹನಗಳನ್ನು ಹಾಗೂ 05 ಜಾನುವಾರುಗಳನ್ನು ಮತ್ತು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 84/2024 ಕಲಂ 5,7,12 ಕರ್ನಾಟಕ ಜಾನುವಾರು ಪ್ರತಿಬಂಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಆದ್ಯಾದೇಶ 2020 ಮತ್ತು ಕಲಂ 11(ಡಿ) ಪ್ರಾಣಿ ಹಿಂಸೆ ತಡೆಕಾಯಿದೆ 1960 ರಂತೆ ಪ್ರಕರಣ ದಾಖಲಾಗಿರುತ್ತದೆ.