ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ ಬಾಲಮಂಟಮೆಯಲ್ಲಿ ಇದೇ ಬರುವ ತಾ.10ನೇ, ಗುರುವಾರ ನಡೆಯಲಿರುವ ಗ್ರಾಮ ದೈವಗಳ ವಾರ್ಷಿಕ ನೇಮೋತ್ಸವದ ಗೊನೆ ಮುಹೂರ್ತವು ತಂತ್ರಿಗಳಾದ ಪಳನೀರು ಅನಂತ ಭಟ್ಟರ ಪೌರೋಹಿತ್ಯದಲ್ಲಿ ಗಣಹೋಮ ಇತ್ಯಾದಿ ವೈದಿಕ ವಿದಿ ವಿಧಾನಗಳೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಅರೆಬೆಟ್ಟುಗುತ್ತು ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ತಿರುಮಲ ಕುಮಾರ್ ಮಜಿ, ಪ್ರಕಾಶ್ ಭಟ್ ಕೋಲ್ಪೆ, ಬನ್ನೂರುಗುತ್ತು ಸುಧೀರ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಶಂಭುಗ, ಲೋಕೇಶ್ ಬಂಗೇರ ಪಲ್ಲತ್ತಿಲ, ಗೋಪಾಲ ಮೂಲ್ಯ ನೆಲ್ಲಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪೂಜಾ ವಿಧಿ-ವಿಧಾನಗಳ ವಿವರ: ಅ. 10 ಗುರುವಾರದಂದು ಸಂಜೆ 4 ಗಂಟೆಗೆ ಮಾಣಿ ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟು ಸಂಜೆ ಗಂಟೆ 5.00ಕ್ಕೆ ಶಂಭುಗ ಬಾಲ ಭಂಡಾರ ಆಗಮನ ಶ್ರೀ ದೈವಗಳ ಭಂಡಾರಯೇರಿ ನವರಾತ್ರಿ ಪೂಜೆ ನಂತರ ರಾತ್ರಿ 9.00 ಗಂಟೆಗೆ ಅನ್ನಸಂತರ್ಪಣೆ. ರಾತ್ರಿ ಗಂಟೆ10.00ಕ್ಕೆ ‘ದೈವಗಳ ನೇಮ’ ಜರಗಲಿರುವುದು. ಅ.11ಕ್ಕೆ ಶುಕ್ರವಾರ ಬೆಳಗ್ಗೆ ಗಂಟೆ 8.00ಕ್ಕೆ ಭಂಡಾರ ನಿರ್ಗಮನ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.