Wednesday, July 15, 2026
Homeಕರಾವಳಿಬೆಳ್ತಂಗಡಿ : ಅಡಿಕೆ ಮರ ಕಡಿಯುವಾಗ ತಲೆ ಮೇಲೆ ಬಿದ್ದು ವೃದ್ಧ ಸಾವು

ಬೆಳ್ತಂಗಡಿ : ಅಡಿಕೆ ಮರ ಕಡಿಯುವಾಗ ತಲೆ ಮೇಲೆ ಬಿದ್ದು ವೃದ್ಧ ಸಾವು

- Advertisement -
- Advertisement -

ಬೆಳ್ತಂಗಡಿ : ಹಳೆ ಅಡಿಕೆ ಮರ ಕಡಿಯುತ್ತಿರುವಾಗ ಆಕಸ್ಮಿಕವಾಗಿ ವೃದ್ಧರೊಬ್ಬರ ತಲೆ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ಇಂದಬೆಟ್ಟುವಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಅಂಕೊತ್ಯಾರು ನಿವಾಸಿ ನವೀನ್ ಎಂಬವರ ಮನೆಯ ತೋಟದಲ್ಲಿ ಹಳೆ ಅಡಿಕೆ ಮರ ಕಡಿಯಲು ಮುಂಡಾಜೆಯ ನೌಫಾಲ್ ಎಂಬವರಿಗೆ ಕಾಂಟ್ರಾಕ್ಟ್ ನೀಡಿದ್ದು ಅದರಂತೆ ಇಂದು ಬೆಳಗ್ಗೆ ಸುಮಾರು 10:30 ಕ್ಕೆ ಅಡಕೆ ಮರ ಕಡಿಯುತ್ತಿದ್ದಾಗ ಮುಂಡಾಜೆ ಗ್ರಾಮದ ಮಂಜು ಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು ನಾಲ್ಕೆ(66) ತಲೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದು ತಕ್ಷಣ ಕೆಲಸಗಾರರು ಸೇರಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು.

ಆದ್ರೆ ಚಿಕಿತ್ಸೆ ಫಲಿಸದೆ ಅಣ್ಣು ನಾಲ್ಕೆ ಸಾವನ್ನಪ್ಪಿದ್ದಾರೆ ಈ ಬಗ್ಗೆ ಮಗ ಅನಂತ ಮುಂಡಾಜೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!