Thursday, June 4, 2026
Homeಕರಾವಳಿವಿಶ್ವಹಿಂದು ಪರಿಷದ್ ಕಾರ್ಯಾಲಯದಲ್ಲಿ ಕ್ಷಮೆಯಾಚಿಸಿದ ನಟ ಅರವಿಂದ್ ಬೋಳಾರ್

ವಿಶ್ವಹಿಂದು ಪರಿಷದ್ ಕಾರ್ಯಾಲಯದಲ್ಲಿ ಕ್ಷಮೆಯಾಚಿಸಿದ ನಟ ಅರವಿಂದ್ ಬೋಳಾರ್

- Advertisement -
- Advertisement -

ಮಂಗಳೂರು: ಕಳೆದ ಭಾನುವಾರ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರಗೊಂಡ ‘ಪ್ರೈವೇಟ್ ಚಾಲೆಂಜ್’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ಶಾಸ್ತ್ರ ಮತ್ತು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಕಾರ್ಯಕ್ರಮ ನಡೆಸಿಕೊಡುವ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮತ್ತು ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ಹಾಸ್ಯ ನಟ ಅರವಿಂದ್ ಬೋಳಾರ್ ವಿರುದ್ಧ ನಗರದ ಕಾವೂರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

ಕಾಮಿಡಿ ಶೋ ಗೆ ಸಂಬಂಧಪಟ್ಟಂತೆ ತನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ, ವಿಶ್ವಹಿಂದೂ ಪರಿಷದ್ ಕಾರ್ಯಾಲಯ ‘ವಿಶ್ವಶ್ರೀ’ ಗೆ ನಟ ಅರವಿಂದ್ ಬೋಳಾರ್ ಭೇಟಿನೀಡಿ “ನನ್ನಿಂದ ಮಾತಿನಲ್ಲಿ ಪ್ರಮಾದವಾಗಿದೆ, ನನ್ನಿಂದ ತಪ್ಪಾಗಿದೆ, ಮುಂದೆ ಈ ರೀತಿಯ ಯಾವುದೇ ದೃಶ್ಯಗಳನ್ನು ನಾನು ಮಾಡುವುದಿಲ್ಲ” ಎಂದು ಹಿಂದೂ ಸಮಾಜದ ಬಳಿ ಕ್ಷಮೆ ಕೇಳಿದರು. ಈ ಸಂಧರ್ಭದಲ್ಲಿ ವಿಶ್ವಹಿಂದೂ ಪರಿಷದ್ ಮುಖಂಡರು ಉಪಸ್ಥಿತಿ ಇದ್ದರು.

- Advertisement -

Latest News

error: Content is protected !!