Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ:  ಬಂದಾರು ಶ್ರೀ ಚಾಮುಂಡೇಶ್ವರಿ  ದೇವಸ್ಥಾನ ಮುಂಡೂರಿನಲ್ಲಿ ವರ್ಷಾವಧಿ  ಜಾತ್ರಾ ಮಹೋತ್ಸವ

ಬೆಳ್ತಂಗಡಿ:  ಬಂದಾರು ಶ್ರೀ ಚಾಮುಂಡೇಶ್ವರಿ  ದೇವಸ್ಥಾನ ಮುಂಡೂರಿನಲ್ಲಿ ವರ್ಷಾವಧಿ  ಜಾತ್ರಾ ಮಹೋತ್ಸವ

- Advertisement -
- Advertisement -

ಬೆಳ್ತಂಗಡಿ:  ಬಂದಾರು ಗ್ರಾಮದ  ಶ್ರೀ ಚಾಮುಂಡೇಶ್ವರಿ  ದೇವಸ್ಥಾನ ಮುಂಡೂರು (ರಿ.) ಇಲ್ಲಿ  ವರ್ಷಾವಧಿ  ಜಾತ್ರಾ ಮಹೋತ್ಸವ, ಪ್ರಯುಕ್ತ ಏಪ್ರಿಲ್ 21 ಸೋಮವಾರ ಸಂಜೆ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಹೋಮ ಇತ್ಯಾದಿ ನಡೆಯಲಿದೆ.

ಏಪ್ರಿಲ್ 22 ಮಂಗಳವಾರ ದಂದು ಬೆಳಗ್ಗೆ ಗಣಹೋಮ, ಶ್ರೀ ದುರ್ಗಾಪರಮೇಶ್ವರಿ, ಗಣಪತಿ ಚಾಮುಂಡೇಶ್ವರಿ, ಪರಿವಾರ ದೈವಗಳಿಗೆ,ಕಲಶಾರಾಧನೆ, ನಾಗ ತಂಬಿಲ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ,ಬೆಳಗ್ಗೆ 6.00 ರಿಂದ  ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ,ಸಂಜೆ  6.00 ಗಂಟೆಗೆ ರಂಗಪೂಜೆ, ರಾತ್ರಿ 8.30 ಕ್ಕೆ ಅನ್ನ ಸoತರ್ಪಣೆ,ಸಂಜೆ 6.30 ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಹರಿದರ್ಶನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಶ್ರೀಮತಿ ಮತ್ತು ಶ್ರೀ ಸುಬ್ಬಣ್ಣ ಗೌಡ ಮತ್ತು ಮನೆಯವರು ಹಾಗೂ ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಎಂ. ಆನಂದ ಗೌಡ ಹಾಗೂ ಭಕ್ತವೃಂದದವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!