- Advertisement -
- Advertisement -
ನವದೆಹಲಿ: ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಸಹೋದರ ಅನಿಲ್ ದೇವಗನ್ (45) ನಿಧನರಾಗಿದ್ದಾರೆ. ಮಂಗಳವಾರ ಈ ಬಗ್ಗೆ ಅಜಯ್ ದೇವಗನ್ ಮಾಹಿತಿ ನೀಡಿದ್ದಾರೆ.
ನಾನು ನಿನ್ನೆ ರಾತ್ರಿ ನನ್ನ ಸಹೋದರ ಅನಿಲ್ ದೇವಗನ್ನನ್ನು ಕಳೆದುಕೊಂಡೆ. ಅವನ ಅಕಾಲಿಕ ಮರಣ ನಮ್ಮ ಕುಟುಂಬಕ್ಕೆ ದುಃಖ ಉಂಟುಮಾಡಿದೆ. ಎಡಿಎಫ್ಎಫ್ ಮತ್ತು ನಾನು ಅವನ ಉಪಸ್ಥಿತಿಯನ್ನು ದಿನ ಮಿಸ್ ಮಾಡಿಕೊಳ್ಳುತ್ತೇನೆ. ಅವನ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇನೆ ಎಂಬುದಾಗಿ ಅಜಯ್ ದೇವಗನ್ ಹೇಳಿಕೊಂಡಿದ್ದಾರೆ.ಅನಿಲ್ ‘ರಾಜು ಚಾಚಾ’ ಹಾಗೂ ‘ಬ್ಲ್ಯಾಕ್ಮೇಲ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.
- Advertisement -