Wednesday, June 3, 2026
Homeಕರಾವಳಿಬಂಟ್ವಾಳ: ಪಾಣಾಜೆಕೋಡಿಯಲ್ಲಿ ನೂತನ ಅಂಗನವಾಡಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚಾಲನೆ

ಬಂಟ್ವಾಳ: ಪಾಣಾಜೆಕೋಡಿಯಲ್ಲಿ ನೂತನ ಅಂಗನವಾಡಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚಾಲನೆ

- Advertisement -
- Advertisement -

ಬಂಟ್ವಾಳ:  ಕೊಳ್ನಾಡು ಗ್ರಾ.ಪಂ. ವ್ಯಾಪ್ತಿಯ ಪಾಣಾಜೆಕೋಡಿ ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚಾಲನೆ ನೀಡಿದರು.

 ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಬಾಲ್ಯದ ಪೂರ್ವ ಪ್ರಥಮ ಶಿಕ್ಷಣದ ಜೊತೆ ದೈಹಿಕ ಮಾನಸಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸರಕಾರ ಅಂಗನವಾಡಿ ಮೂಲಕ ಹಲವಾರು ಯೋಜನೆ ಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಭಾಗದ ಪ್ರತಿ ಮಕ್ಕಳು ಇದರ ಪ್ರಯೋಜನ ಪಡೆಯಲು ಸಾಧ್ಯ ಎಂದು ಅವರು ಎಂದರು

 ಅಂಗನವಾಡಿಯಲ್ಲಿ ಶಿಕ್ಷಣ ಪಡೆಯುವ ಪ್ರತಿ ಮಕ್ಕಳ ಬಗ್ಗೆ ಮನೆಯ ಮಕ್ಕಳ ರೀತಿಯಲ್ಲಿ ನಿಗಾವಹಿಸಬೇಕು ಎಂದು ಇದೇ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.  ಪ್ರತಿ ಗ್ರಾಮವು ರಾಮ ರಾಜ್ಯವಾಗಬೇಕು ಎಂಬ ಉದ್ದೇಶದಿಂದ ಉದ್ಯೋಗ ಖಾತರಿ ಯೋಜನೆಯಡಿ ಅನುದಾನಗಳನ್ನು ಒದಗಿಸುತ್ತಿದ್ದು, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮದ ಜನರ ಸಹಕಾರವಿರಲಿ ಎಂದು ಶುಭ ಹಾರೈಸಿದರು.

ಕೊಳ್ನಾಡು  ಗ್ರಾ.ಪಂ. ಅಧ್ಯಕ್ಷೆ ನೇಬಿಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಸದಸ್ಯರಾದ ಕಿಶೋರ್ ದೇವಾಡಿಗ, ಮಹಮ್ಮದ್ ಮಂಚಿ, ಲವೀನಾ, ವಸಂತಿ, ರಾಜಾರಾಮ್ ಹೆಗ್ಡೆ, ಲೋಹಿತ್, ಪ್ರಶಾಂತ್ , ಜಯಂತಿ ಎಸ್.ಪೂಜಾರಿ, ವಿಟ್ಲ ಸಿ.ಡಿ.ಪಿ.ಒ ಉಷಾ, ಗುತ್ತಿಗೆದಾರ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸುಭಾಶ್ವಂಧ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಿ.ಡಿ.ಒ ರೋಹಿಣಿ ಬಿ ಸ್ವಾಗತಿಸಿದರು. ಮೇಲ್ವಿಚಾರಕಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!