Wednesday, May 15, 2024
Homeತಾಜಾ ಸುದ್ದಿಜಲಪಾತದ ಬಳಿ ಭಾವಿ ಪತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಯುವತಿ ಸಾವು!

ಜಲಪಾತದ ಬಳಿ ಭಾವಿ ಪತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಯುವತಿ ಸಾವು!

spot_img
- Advertisement -
- Advertisement -

ವಾಷಿಂಗ್ಟನ್: ಅಮೆರಿಕಾದ ಜಲಪಾತದಲ್ಲಿ ಬಳಿ ಭಾವಿ ಪತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಮದುವೆಯಾಗಿ ಬಾಳಿ ಬದುಕಬೇಕಿದ್ದ ಆಂಧ್ರ ಪ್ರದೇಶದ ಯುವತಿ ಪೊಲವರಪ್ಪು ಕಮಲಾ (27 ವ) ಎಂಬುವರು ಕಾಲು ಜಾರಿ ಮೃತಪಟ್ಟಿದ್ದಾರೆ.

ಅಮೆರಿಕಾದ ಬಾಲ್ಡ್ ರಿವರ್ ಫಾಲ್ಸ್ ಗೆ ಭಾವಿ ಪತಿ ಜೊತೆ ಕಮಲಾ ತೆರಳಿದ್ದರು. ಈ ವೇಳೆ ಕಾಲು ಜಾರಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಕೊಡಲೇ ರಕ್ಷಣಾ ಸಿಬ್ಬಂದಿಗಳು ಕಮಲಾಳ ಭಾವಿ ಪತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಮಲಾ ಅವರು ಎಲ್ಲೂ ಸಿಗಲಿಲ್ಲ. ಸ್ವಲ್ಪ ಸಮಯದ ನಂತರ ಕಮಲಾ ಜಲಪಾತದಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ.

ಕೂಡಲೇ ಅವರನ್ನು ಸಿಬ್ಬಂದಿ ಮೇಲಕ್ಕೆ ಎತ್ತಿದರೂ ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಆಂದ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡ್ಲವಳೇರು ಮೂಲದ ಕಮಾಲಾ ತನ್ನ ಎಂಜಿನಿಯರಿಂಗ್ ಪದವಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದ್ದರು. ನಂತರ ಅಲ್ಲೆ ಒಂದು ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

‘ಅಮೆರಿಕಾದ ತೆಲುಗು ಸಂಘದ ಸಹಾಯದಿಂದ ಕಮಲಾಳ ಮೃತದೇಹವನ್ನು ಅಮೆರಿಕಾದಿಂದ ಭಾರತಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದು ಕಮಲಾಳ ತಂದೆ ಹೇಳಿದ್ದಾರೆ. ಕಮಲಾರ ಮತ್ತೊಬ್ಬ ಸಹೋದರಿ ಮದುವೆಯಾಗಿ ಚೆನ್ನೈಯಲ್ಲಿ ವಾಸಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!