Friday, June 2, 2023
Homeಕರಾವಳಿಬಂಟ್ವಾಳ: ಅಮ್ಟೂರು ದೇವಮಾತ ಚರ್ಚ್ ನಲ್ಲಿ ಕಳ್ಳತನ

ಬಂಟ್ವಾಳ: ಅಮ್ಟೂರು ದೇವಮಾತ ಚರ್ಚ್ ನಲ್ಲಿ ಕಳ್ಳತನ

- Advertisement -
- Advertisement -

ಬಂಟ್ವಾಳ: ಚರ್ಚ್ ಒಂದರ ಹುಂಡಿಯಲ್ಲಿದ್ದ ಹಣ ಕಳವು ಮಾಡಿದ್ದಲ್ಲದೆ, ಚರ್ಚ್ ಒಳಗೆ ನುಗ್ಗಿ ಜಾಲಾಡಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಮೊಗರ್ನಾಡು ಎಂಬಲ್ಲಿ ನಡೆದಿದೆ.
ದೇವಾಲಯದ ಎಡ ಬದಿಯ ಬಾಗಿಲನ್ನು ಮುರಿದು ಕಳ್ಳರು ಒಳಪ್ರವೇಶ ಮಾಡಿದ್ದಾರೆ. ‌ಮೊಗರ್ನಾಡು ಅಮ್ಟೂರು ದೇವಮಾತ ಚರ್ಚ್ ನ ಎದುರು ಗಡೆ ಇದ್ದ ಹುಂಡಿ ಹಾಗೂ ಚರ್ಚ್ ಒಳಗಡೆ ಮತ್ತು ಅಲ್ಲಿಯೇ ಇರುವ ಹಾಲ್ ನ ಒಳಗೆ ಇದ್ದಂತಹ ಒಟ್ಟು ನಾಲ್ಕು ಹುಂಡಿಗಳನ್ನು ಒಡೆದು ಅದರೊಳಗೆ ಇದ್ದ ಹಣವನ್ನು ಕಳವು ಮಾಡಿದ ಬಗ್ಗೆ ಮಾಹಿತಿ ದೊರೆತಿದೆ.
ಅಮ್ಟೂರು ದೇವ ಮಾತ ಚರ್ಚ್ ನ ಧರ್ಮಗುರು ಡಾ. ಮಾರ್ಕ್ ಕ್ರಾಸ್ಟಲಿನೊ ಅವರು ನಗರ ಪೋಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ ಸಂತೋಷ್ ಬಿ.ಪಿ. ಎ.ಎಸ್.ಐ.ಸಂಜೀವ ಕೆ. ಸಿಬ್ಬಂದಿ ಗಳಾದ ಸುರೇಶ್ ಪಡಾರ್, ಉಸ್ಮಾನ್ ವಾಲಿಕರ್, ಶ್ರೀಕಾಂತ್ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!