Tuesday, May 7, 2024
Homeಕರಾವಳಿಮಂಗಳೂರು: ಅಮೆಜಾನ್ ಗಿಫ್ಟ್ ವೋಚರ್ ವಂಚನೆ, ಮನೆಗೆ ಬಂದ 12.80 ಲಕ್ಷದ ಸ್ಕ್ಯಾಚ್ ಅಂಡ್ ವಿನ್...

ಮಂಗಳೂರು: ಅಮೆಜಾನ್ ಗಿಫ್ಟ್ ವೋಚರ್ ವಂಚನೆ, ಮನೆಗೆ ಬಂದ 12.80 ಲಕ್ಷದ ಸ್ಕ್ಯಾಚ್ ಅಂಡ್ ವಿನ್ ಗಿಫ್ಟ್ ವೋಚಾರ್ !

spot_img
- Advertisement -
- Advertisement -

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆಗಳು ಸರ್ವೇ ಸಾಮಾನ್ಯ. ಆದರೆ ಇದೀಗ ಪೋಸ್ಟಲ್ ಮೂಲಕವೂ ಅಮಾಯಕರನ್ನು ವಂಚಿಸುವ ಜಾಲ ಶುರುವಾಗಿದೆ. ಮಂಗಳೂರಿನಲ್ಲಿ ಈ ಕಾಮರ್ಸ್ ಅಮೆಜಾನ್ ಹೆಸರಿನಲ್ಲಿ ಗಿಫ್ಟ್ ವೋಚರ್ ಕಳುಹಿಸಿ ವಂಚಿಸಲು ಯತ್ನಿಸಿದ ಘಟನೆ ವರದಿಯಾಗಿದೆ .

ಸ್ಟೀಡ್ ಪೋಸ್ಟ್ ಮೂಲಕ ಅಮೇಜಾನ್ ಹೆಸರಿನಲ್ಲಿ ಸ್ಕ್ಯಾಚ್ ಅಂಡ್ ವಿನ್ ಗಿಫ್ಟ್ ವೋಚಾರ್ ಮಂಗಳೂರು ನಗರದ ಹೊರವಲಯದ ಬೊಂದೇಲ್ ನಿವಾಸಿ ವಿನಾಯಕ ಕಿಣಿ ಅವರಿಗೆ ಬಂದಿದ್ದು , ಅದರಲ್ಲಿ 12 ಲಕ್ಷದ 80 ಸಾವಿರ ನಗದು ಬಹುಮಾನಗಳಿಸಿದ್ದೀರಿ. ಆದರೆ ಅದನ್ನು ಪಡೆಯಲು ಅದರ ಟ್ಯಾಕ್ಸ್ ಹಣವನ್ನು ಕಟ್ಟಬೇಕೆಂದು ಸಂದೇಶ ಕೂಡ ಬಂದಿದೆ .

ಈ ಬಗ್ಗೆ ಸಂದೇಹ ಬಂದು ಕಿಣಿ ಅವರು ಅಮೆಜಾನ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ಬಹುಮಾನ ಯೋಜನೆ ತಮ್ಮ ಬಳಿ ಇಲ್ಲ ಎಂದು ಹೇಳಿದ್ದಾರೆ.

ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕೆಂದು ವಿನಾಯಕ ಕಾಮತ್ ಅವರು ಮನವಿ ಮಾಡಿದ್ದಾರೆ .

- Advertisement -
spot_img

Latest News

error: Content is protected !!