Monday, June 15, 2026
Homeಕರಾವಳಿಮಂಗಳೂರು; ಕಾರಿನೊಳಗೆ ನುಗ್ಗಿದ ಪಿಕಪ್ ನಲ್ಲಿ ಸಾಗಿಸುತ್ತಿದ್ದ ಅಲ್ಯುಮೀನಿಯಂ ಪಟ್ಟಿಗಳು; ;ಚಾಲಕ ಬದುಕಿ ಉಳಿದಿದ್ದೇ ಒಂದು...

ಮಂಗಳೂರು; ಕಾರಿನೊಳಗೆ ನುಗ್ಗಿದ ಪಿಕಪ್ ನಲ್ಲಿ ಸಾಗಿಸುತ್ತಿದ್ದ ಅಲ್ಯುಮೀನಿಯಂ ಪಟ್ಟಿಗಳು; ;ಚಾಲಕ ಬದುಕಿ ಉಳಿದಿದ್ದೇ ಒಂದು ಅಚ್ಚರಿ

- Advertisement -
- Advertisement -

ಮಂಗಳೂರು: ಪಿಕಪ್‌ ವಾಹನದಲ್ಲಿ ಸಾಗಿಸುತ್ತಿದ್ದ ಅಲ್ಯುಮಿನಿಯಂ ಪಟ್ಟಿಗಳು ಏಕಾಏಕಿ ಕಾರಿನ ಒಳಕ್ಕೆ ನುಗ್ಗಿ  ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ಮಂಗಳೂರಿನ ನಂತೂರು ಜಂಕ್ಷನ್‌ನಲ್ಲಿ ನಿನ್ನೆ  ಸಂಜೆ ನಡೆದಿದೆ.

ಪಿಕಪ್ ನಲ್ಲಿ ಕೆಪಿಟಿ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಅಲ್ಯುಮಿನಿಯಂ ಪಟ್ಟಿಗಳನ್ನು  ಸಾಗಿಸಲಾಗುತ್ತಿತ್ತು. ಪಿಕಪ್ ಮುಂದುಗಡೆ ಕಾರೊಂದು ಸಾಗುತ್ತಿತ್ತು. ನಂತೂರು ಜಂಕ್ಷನ್‌ನಲ್ಲಿ ಕಾರು ಚಾಲಕ ಬ್ರೇಕ್‌ ಹಾಕಿದಾಗ ಪಿಕ್‌ಅಪ್‌ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ. ಕಾರಿನಲ್ಲಿ ಚಾಲಕ ಮಾತ್ರವಿದ್ದರು.

ಪಟ್ಟಿಗಳು ಹಿಂಭಾಗದ ಸೀಟುಗಳನ್ನು ದಾಟಿ ಬಂದು ಚಾಲಕನ ಸೀಟಿಗೆ ತಾಗಿ ನಿಂತಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನುಕಾರಿಗೆ ಹಾನಿಯಾಗಿದೆ. ಪಿಕ್‌ಅಪ್‌ ವಾಹನದ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!