Wednesday, May 15, 2024
Homeಉದ್ಯಮಗೂಗಲ್ ಪೇ ಬಳಸುತ್ತಿರುವ ಎಲ್ಲ ಬಳಕೆದಾರರಿಗೂ ಇಲ್ಲಿದೆ ಒಂದು ಮಹತ್ವದ ಮಾಹಿತಿ..

ಗೂಗಲ್ ಪೇ ಬಳಸುತ್ತಿರುವ ಎಲ್ಲ ಬಳಕೆದಾರರಿಗೂ ಇಲ್ಲಿದೆ ಒಂದು ಮಹತ್ವದ ಮಾಹಿತಿ..

spot_img
- Advertisement -
- Advertisement -

ದೇಶದಲ್ಲಿ ಡಿಜಿಟಲ್ ಪಾವತಿ ವಿಧಾನ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಆರಂಭಿಸಿರುವ ಭೀಮ್ ಸೇರಿದಂತೆ ಪೇಟಿಎಂ, ಗೂಗಲ್ ಪೇ ಮೊದಲಾದವುಗಳು ಈ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿವೆ.

ಇದರ ಮಧ್ಯೆ ಗೂಗಲ್ ಪೇ ಆಪ್ ಅನಧಿಕೃತವಾಗಿದ್ದು, ಇದರ ಮೂಲಕ ನಡೆಯುವ ಹಣದ ವಹಿವಾಟಿಗೆ ಯಾವುದೇ ರಕ್ಷಣೆ ಇರುವುದಿಲ್ಲ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ನಂಬಬಾರದು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ತಿಳಿಸಿದೆ.

ಗೂಗಲ್‌ ಪೇ ಅನ್ನು ಥರ್ಡ್‌ಪಾರ್ಟಿ ಆಯಪ್‌ ಪ್ರೊವಿಡರ್‌ (ಟಿಪಿಎಪಿ) ಎಂದು ವರ್ಗೀಕರಿಸಲಾಗಿದ್ದು, ಇತರ ಸಂಸ್ಥೆಗಳಂತೆಯೇ ‘ಯುಪಿಐ’ ಪಾವತಿ ಸೇವೆ ಒದಗಿಸುತ್ತಿದೆ. ‘ಎನ್‌ಪಿಸಿಐ’ನ ‘ಯುಪಿಐ’ ಚೌಕಟ್ಟಿನಡಿ ಬ್ಯಾಂಕಿಂಗ್‌ ಪಾಲುದಾರರ ಜತೆ ಕಾರ್ಯನಿರ್ವಹಿಸುತ್ತಿದೆ. ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಎನ್ನುವುದು ಮೊಬೈಲ್‌ ಮೂಲಕ ಎರಡು ಬ್ಯಾಂಕ್‌ ಖಾತೆಗಳ ಮಧ್ಯೆ ತಕ್ಷಣಕ್ಕೆ ಹಣ ವರ್ಗಾಯಿಸುವ ವ್ಯವಸ್ಥೆಯಾಗಿದೆ. ಯುಪಿಐ ಆಯಪ್‌ಗಳನ್ನು ದೇಶದಲ್ಲಿ ‘ಥರ್ಡ್‌ ಪಾರ್ಟಿ ಆಯಪ್‌’ ಎಂದು ವರ್ಗೀಕರಿಸಲಾಗಿದೆ.

- Advertisement -
spot_img

Latest News

error: Content is protected !!