Wednesday, May 15, 2024
Homeತಾಜಾ ಸುದ್ದಿಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟ ದರ ಏರಿಕೆ; ರೇಟ್ ನೋಡಿದ್ರೆ ಇಳಿಯುತ್ತೆ ಕಿಕ್...

ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟ ದರ ಏರಿಕೆ; ರೇಟ್ ನೋಡಿದ್ರೆ ಇಳಿಯುತ್ತೆ ಕಿಕ್…

spot_img
- Advertisement -
- Advertisement -

ಬೆಂಗಳೂರು: ವಿದ್ಯುತ್ ಬೆಲೆ ಏರಿಕೆಯ ಹೊಡೆತದ ಮಧ್ಯೆ ಇದೀಗ ಸದ್ದಿಲ್ಲದೇ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಸದ್ದಿಲ್ಲದೆ ಮದ್ಯದ ದರಗಳನ್ನು ಕೂಡ ಹೆಚ್ಚಳ ಮಾಡಲಾಗಿದೆ.

ಮದ್ಯಪ್ರಿಯರಿಗೆ ಶಾಕ್ ಎನ್ನುವಂತೆ ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್ ಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಅದರಂತೆ ಬಡ್ ವೈಸರ್ ಬಿಯರ್ ದರ ರೂ.198 ರಿಂದ 220ಕ್ಕೆ ಹೆಚ್ಚಳ ಮಾಡಲಾಗಿದೆ. ಕಿಂಗ್ ಫಿಶರ್ ಬಿಯರ್ ದರವನ್ನು ರೂ.160ರಿಂದ 170ಕ್ಕೆ ಏರಿಕೆ ಮಾಡಲಾಗಿದೆ. ಯುಬಿ ಪ್ರೀಮಿಯಂ ದರ ರೂ.125ರಿಂದ 135, ಸ್ಟ್ರಾಂಗ್ ದರ ರೂ.130ರಿಂದ 135ಗೆ ಹೆಚ್ಚಳ ಮಾಡಲಾಗಿದೆ.

ಇನ್ನೂ ಬಿಯರ್ ಅಷ್ಟೇ ಅಲ್ಲದೇ ಪುಲ್ ಬಾಟೆಲ್ ಹಾರ್ಡ್ ಡ್ರಿಂಕ್ಸ್ ಗಳಾದಂತ ಆಫೀಸರ್ ಚಾಯಿಸ್ ಪುಲ್ ಕ್ವಾಟರ್ ಬಾಟಲ್ ದರ ರೂ.440ರಿಂದ ರೂ.568ಕ್ಕೆ ಹೆಚ್ಚಳ ಮಾಡಿದ್ದು, ಬಿಪಿ ಬೆಲೆ ಕೂಡ 440 ರೂನಿಂದ 568ಕ್ಕೆ ಹೆಚ್ಚಳ ವಾಗಿದೆ.ಇದಷ್ಟೇ ಅಲ್ಲದೇ ಇತರೆ ಬಿಯರ್ ಸೇರಿದಂತೆ ಮದ್ಯದ ದರವನ್ನು ಪ್ರತಿ ಬಾಟಲ್ ಗೆ ರೂ.10 ರಿಂದ 20ರವರೆಗೆ ಹೆಚ್ಚಳ ಮಾಡಲಾಗಿದೆ. ಮದ್ಯಪ್ರಿಯರಿಗೆ ಎಂಎಸ್‌ಐಎಲ್ ನಲ್ಲಿ ಎಂ.ಆರ್ ಪಿ ದರದಂತೆ ಸಿಕ್ಕರೇ, ಬಾರ್, ರೆಸ್ಟೋರೆಂಟ್ ಗಳಲ್ಲಿ 10 ರಿಂದ 20 ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ.

- Advertisement -
spot_img

Latest News

error: Content is protected !!