Thursday, June 4, 2026
Homeತಾಜಾ ಸುದ್ದಿಚಿರು ನೆನೆದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಭಾವುಕ ಪೋಸ್ಟ್!

ಚಿರು ನೆನೆದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಭಾವುಕ ಪೋಸ್ಟ್!

- Advertisement -
- Advertisement -

ನಟ ಅರ್ಜುನ್ ಸರ್ಜಾರ ಪುತ್ರಿ ಐಶ್ವರ್ಯಾ ಸರ್ಜಾ ಇನ್‍ಸ್ಟಾಗ್ರಾಂನಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗಿನ ಬಾಲ್ಯದ ಫೋಟೋವನ್ನು ಹಾಕಿ ಚಿರು ಜೊತೆ ಇದ್ದ ಸಂತೋಷದ ದಿನಗಳನ್ನ ನೆನಪಿಸಿಕೊಳ್ತಿದ್ದಾರೆ.

ಸರ್ಜಾ ಕುಟುಂಬದ ಮಕ್ಕಳೆಲ್ಲರೂ ಒಟ್ಟಿಗೇ ಬೆಳೆದವರು. ಅರ್ಜುನ್ ಸರ್ಜಾ ಅವರ ಸಹೋದರಿ ಅಮ್ಮಾಜಿ ಅವರ ಮಕ್ಕಳಾದ ಚಿರು, ಧ್ರುವ, ಅರ್ಜುನ್ ಪುತ್ರಿಯರಾದ ಐಶ್ವರ್ಯಾ ಮತ್ತು ಅಂಜನಾ ಹೀಗೆ ಎಲ್ಲರೂ ಒಟ್ಟಿಗೇ ಆಡಿಕೊಂಡು ಬೆಳೆದವರು.

ಆದ್ರೆ ಇವರೆಲ್ಲರನ್ನ ಬಿಟ್ಟು ಚಿರು ದೂರಾಗಿದ್ದಾರೆ. ಹೀಗಾಗಿ ಚಿರು ಜೊತೆಗಿದ್ದ ಬಾಲ್ಯದ ಫೋಟೋಗಳನ್ನ ಐಶ್ವರ್ಯ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡ್ತಿದ್ದಾರೆ. ಈ ಮೂಲಕ ಐಶ್ವರ್ಯ ಚಿರು ಸರ್ಜಾರ ನೆನಪಲ್ಲೇ ದಿನ ಕಳೆಯುತ್ತಿದ್ದಾರೆ.

ಅಣ್ಣನ ಅಗಲಿಕೆಯ ಐದು ದಿನಗಳ ನಂತರ ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ನಟಿ ಐಶ್ವರ್ಯಾ ಅರ್ಜುನ್ ಚಿರಂಜೀವಿಯನ್ನು ನೆನೆದು ಭಾವುಕರಾಗಿದ್ದಾರೆ.

View this post on Instagram

Chiranjeevi ❤️

A post shared by Aishwarya Arjun (@aishwaryaarjun) on

- Advertisement -

Latest News

error: Content is protected !!