ಬಂಟ್ವಾಳ: ಹಡಿಲು ಭೂಮಿಯಲ್ಲಿ ಕೃಷಿಕ್ರಾಂತಿ ಎಂಬ ಬಂಟ್ವಾಳ ಶಾಸಕರ ಯೋಜನೆಯಂತೆ ಬಿಜೆಪಿ ಯುವಮೋರ್ಚಾ ತಂಡದ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರ ಮುಂದಾಳತ್ವದಲ್ಲಿ ಅಮ್ಮುಂಜೆ ಪರಿಸರದ ಸುಮಾರು 5 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದ್ದಾರೆ.


ಬಳಿಕ ಮಾತನಾಡಿದ ಅವರು ಯುವ ಸಮುದಾಯ ಕೃಷಿಯತ್ತ ಒಲವು ತೋರಿದರೆ ಈ ದೇಶದಲ್ಲಿ ಕೃಷಿಯಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ ಎಂದು ಹೇಳಿದರು. ಈ ವರ್ಷ ಜಿಲ್ಲೆಯ ಲ್ಲಿ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡಲು ಬಿಜೆಪಿ ಹೆಚ್ಚಿ ಒತ್ತು ನೀಡಿದ್ದು, ತಾಲೂಕಿನಲ್ಲಿ ಸುಮಾರು 600 ಎಕರೆಯಷ್ಟು ಹಡಿಲು ಬಿದ್ದ ಕೃಷಿಗೆ ಭೂಮಿಗೆ ಕಾಯಕಲ್ಪ ನೀಡಲು ಬಿಜೆಪಿ ಯುವಮೋರ್ಚಾ ಮುಂದಾಗಿದೆ ಎಂದರು.
ಇನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಸರಕಾರದ ವಿಶೇಷ ಸವಲತ್ತುಗಳನ್ನು ಪಡೆದು ಕೊಂಡು ರೈತರು ಸ್ವಯಂಪ್ರೇರಿತರಾಗಿ ಕೃಷಿ ಮಾಡಬೇಕು ಎಂಬುದು ಮೋದಿಯವರ ಕನಸು ಆಗಿದ್ದು ಎಲ್ಲಾ ಕೃಷಿಕರಿಗೆ ಪ್ರೇರಣೆ ಯಾಗುವ ನಿಟ್ಟಿನಲ್ಲಿ ಕೃಷಿ ಕ್ರಾಂತಿಯ ಯೋಚನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹಡಿಲು ಬಿದ್ದ ಎಲ್ಲಾ ಕೃಷಿ ಭೂಮಿ ಗಳು ಸಾಗುವಳಿಗೆ ಒಳಪಡಲಿ ಎಂದು ಶುಭ ಹಾರೈಸಿದರು
ಬಿಜೆಪಿ ಬಂಟ್ವಾಳ ಯುವಮೋರ್ಚಾ ಅಧ್ಯಕ್ಷರು ಪ್ರದೀಪ್ ಅಜ್ಜಿಬೆಟ್ಟು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ,ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ,ಕ್ಷೇತ್ರ ಕಾರ್ಯದರ್ಶಿ ರಮಾನಾಥ್ ರಾಯಿ,ಜಿಲ್ಲಾ ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ಸುದರ್ಶನ್ ಭಜ ,ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ವಿನಿತ್ ಶೆಟ್ಟಿ ಪೆರಾಜೆ, ಕ್ಷೇತ್ರ ಯುವಮೋರ್ಚಾ ಪ್ರದಾನ ಕಾರ್ಯದರ್ಶಿಗಳಾದ ದಿನೇಶ್ ಶೆಟ್ಟಿ ದಂಬೆದಾರ್ ಹಾಗೂ ಅಶ್ವಥ್ ರಾವ್ ಬಾಳಿಕೆ ,ಪ್ರಮೋದ್ ನೂಜಿಪ್ಪಾಡಿ ,ನಿಶಾಂತ್ ಶೆಟ್ಟಿ,ಜಯಾನಂದ್ ಅಲ್ಲಿಪಾದೆ ,ದಯಾನಂದ ಎರ್ಮೆನಾಡ್ ಹಾಗೂ ಅಂಮುಂಜೆ ಗ್ರಾಮಪಂಚಾಯತ್ ಅಧ್ಯಕ್ಷರಾದ ವಾಮನ ಆಚಾರ್ಯ ,ಉಪಾಧ್ಯಕ್ಷರು ಪ್ರಮೀಳಾ ಹಾಗೂ ಸದಸ್ಯರಾದ ರೋನಾಲ್ಡ್ , ಭಾಗೀರಥಿ ,ಕಾರ್ತಿಕ್ ಬಳ್ಳಾಲ್ ,ಜನಾರ್ಧನ್ ದಾಸಿಮಾರ್ ,ಜಯಂತ ಅಂಮುಂಜೆ ದಿನೇಶ್ ಗಾನೆಮಾರ್ ,ಉಮೇಶ್ ಪೂಜಾರಿ ,ಬಾಬು ಪೂಜಾರಿ, ಪ್ರಕಾಶ್ ದಾಸಿಮಾರ್ ,ಪ್ರಶಾಂತ್ ಕುಲಾಲ್ ,ದಿಶಾಂತ್ ಮತ್ತು ಪಕ್ಷದ ಹಾಗೂ ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು


