Saturday, June 6, 2026
Homeಕರಾವಳಿಬೆಳ್ತಂಗಡಿ : ಉಜಿರೆಯಲ್ಲಿ ಮತ್ತೆ ಲಾಡ್ಜ್ ಮೇಲೆ ರೈಡ್ ; ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಲಾಡ್ಜ್...

ಬೆಳ್ತಂಗಡಿ : ಉಜಿರೆಯಲ್ಲಿ ಮತ್ತೆ ಲಾಡ್ಜ್ ಮೇಲೆ ರೈಡ್ ; ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಲಾಡ್ಜ್ ಗಳ ತಪಾಸಣೆ

- Advertisement -
- Advertisement -

ಬೆಳ್ತಂಗಡಿ : ಅಕ್ರಮಗಳ ಮೇಲೆ ನಿಗಾ ಇರಿಸಿಕೊಂಡು ಮತ್ತೆ ಲಾಡ್ಜ್ ಗಳ ಮೇಲೆ ದಾಳಿ ಮಾಡಿ ತಪಾಸಣೆ ಮಾಡಿ ಸೂಕ್ತ ಎಚ್ಚರಿಕೆ ಸಂದೇಶ ನೀಡಿದ ಬೆಳ್ತಂಗಡಿ ಖಡಕ್ ಆಫೀಸರ್ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ.

ಬೆಳ್ತಂಗಡಿ ತಾಲೂಕಿನ ಉಜಿರೆಯ ಸುಮಾರು ಏಂಟು ಲಾಡ್ಜ್ ಗಳ ಮೇಲೆ ಬಂಟ್ವಾಳ ಡಿವೈಎಸ್ಪಿರವರ ಮಾರ್ಗದರ್ಶನ ಪಡೆದ ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ ಫೆ.25 ರಂದು ಸಂಜೆ 6 ಗಂಟೆಗೆ ಫೀಲ್ಡಿಗೆ ಇಳಿದಿದ್ದಾರೆ.

ಎಲ್ಲಾ ಲಾಡ್ಜ್ ಗಳಲ್ಲಿ ಪ್ರತಿ ರೂಂಗಳನ್ನು  ಪರಿಶೀಲನೆ ನಡೆಸಿದ ಬಳಿಕ ಎಂಟ್ರಿ ಪುಸ್ತಕಗಳನ್ನು ಪರಿಶೀಲನೆ ಮಾಡಿದ್ದಾರೆ. ಆದ್ರೆ ಯಾವ ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆಗಳು ಪತ್ತೆಯಾಗಿಲ್ಲ. ಅದಲ್ಲದೆ ಲಾಡ್ಜ್ ಮಾಲೀಕರಿಗೆ ಖಡಕ್ ಎಚ್ಚರಿಕೆ ಸಂದೇಶ ನೀಡಿ ತೆರಳಿದ್ದಾರೆ.

ಕಾರ್ಯಾಚರಣೆಯಲ್ಲಿ ಖಡಕ್ ಆಫೀಸರ್ ಅಗಿರುವ ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ಭಾಗಿಯಾಗಿದ್ದರು.

- Advertisement -

Latest News

error: Content is protected !!