- Advertisement -
![]()
- Advertisement -
ಬೆಳ್ತಂಗಡಿ : ರೌಡಿಶೀಟರ್ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಆದೇಶ ಮಾಡಲಾಗಿದೆ.16-12-2025 ರಿಂದ 16-09-2026 ರವೆಗೆ 10 ತಿಂಗಳು ಗಡಿಪಾರಿಗೆ ಆದೇಶ ಮಾಡಲಾಗಿದೆ.
ಪುತ್ತೂರು ಎ.ಸಿ. ಸ್ಟೇಲಾ ವರ್ಗಿಸ್ ಡಿ.17 ರಂದು ಉಜಿರೆಯ ರೌಡಿಶೀಟರ್ ಮಹೇಶ್ ಶೆಟ್ಟಿಯನ್ನು ಈ ಹಿಂದಿನ ಆದೇಶದಂತೆ ಮರು ಪರಿಶೀಲನೆ ಮಾಡಿ 10 ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಗಡಿಪಾರು ಆದೇಶ ಪ್ರತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಮೇರಗೆ ಡಿ.18 ರಂದು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬೆಳ್ತಂಗಡಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಲು ಮುಂದಾಗಿದ್ದರೂ ಆದ್ರೆ ತಿಮರೋಡಿಗೆ ಮೊದಲೇ ಮಾಹಿತಿ ತಿಳಿದು ಮನೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
- Advertisement -


