Thursday, June 4, 2026
Homeತಾಜಾ ಸುದ್ದಿತನ್ನ ವಿರುದ್ಧ ಎಫ್ ಐಆರ್ ದಾಖಲಾಗುತ್ತಿದ್ದಂತೆ ಉಲ್ಟಾ ಹೊಡೆದ ಪ್ರಶಾಂತ್ ಸಂಬರಗಿ

ತನ್ನ ವಿರುದ್ಧ ಎಫ್ ಐಆರ್ ದಾಖಲಾಗುತ್ತಿದ್ದಂತೆ ಉಲ್ಟಾ ಹೊಡೆದ ಪ್ರಶಾಂತ್ ಸಂಬರಗಿ

- Advertisement -
- Advertisement -

ಬೆಂಗಳೂರು ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ದಿನಕ್ಕೊಂದು ಹೆಸರು ಕೇಳಿ ಬರುತ್ತಲೇ ಇದೆ. ಇನ್ನು ಈ ಪ್ರಕರಣದಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೇಳಿ ಬಂದದ್ದು ನಿಮಗೆಲ್ಲಾ ಗೊತ್ತೇ ಇದೆ. ಪ್ರಶಾಂತ್ ಸಂಬರಗಿ ಜಮೀರ್ ಅಹ್ಮದ್ ಶ್ರೀಲಂಕಾಗೆ ಸಂಜನಾ ಜೊತೆ ಹೋಗಿದ್ದರು ಎಂದು ಹೇಳಿಕೆ ಕೊಟ್ಟಿದ್ದರು. ಅವರಿಬ್ಬರಿಗೆ ಏನ್ ಸಂಬಂಧ ಎಂದು ಪ್ರಶ್ನಿಸಿದ್ದರು. ಆದರೆ ಇದೀಗ ಶಾಸಕ ಜಮಿರ್ ಅಹ್ಮದ್ ಎಫ್‌ಐಆರ್ ದಾಖಲಿಸ್ತಿದ್ದಾಗೆ ಸಂಬರಗಿ ಉಲ್ಟಾ ಹೊಡೆದಿದ್ದಾರೆ.

ಅದು ಅವರ ವೈಯುಕ್ತಿಕ ವಿಚಾರ ಎನ್ನುತ್ತಿದ್ದಾರೆ. ಶಾಸಕ ಜಮೀರ್ ಅಹಮದ್ ಮೂರು ದಿನ ಸಂಜನಾ ಜೊತೆ ಎಲ್ಲಿದ್ದರು ಅಂತಿದ್ದ ಸಂಬರಗಿ ಅವರು ಈಗ ಸಂಜನಾ ಜೊತೆಗಾದ್ರೂ ಹೋಗ್ಲಿ ಕತ್ರಿನ ಕೈಫ್ ಜೊತೆಯಾದರೂ ಇರಲಿ ಅಥವಾ ಐಶ್ವರ್ಯ ಜೊತೆಗೇ ಹೋಗಲಿ ಅದು ಅವರ ವೈಯುಕ್ತಿಕ ವಿಚಾರ ಎನ್ನುತ್ತಿರುವ ಸಂಬರಗಿ ಇದೀಗ ತಮ್ಮ ಪ್ರಶ್ನೆಯನ್ನೇ ಬದಲಿಸುತ್ತಿದ್ದಾರೆ. 

ತಾವು ಕೇಳಿದ್ದು 2019ರ ಜೂ.8, 9 ಹಾಗೂ 10ರಂದು ಎಲ್ಲಿದ್ರಿ..? ನೀವು ಕ್ಯಾಸಿನೋದ ಗ್ಯಾಂಬ್ಲಿಂಗ್‌ನಲ್ಲಿದ್ರಿ ಎನ್ನುತ್ತಿದ್ದಾರೆ. ಈ ಬಗ್ಗೆ ದಾಖಲೆ ಕೊಡೋದಾಗಿಯೂ ಹೇಳ್ತಿದ್ದಾರೆ.  ಆವತ್ತು ಒಂದು ಮಾತನಾಡಿ ಇಂದು ಪ್ರಶಾಂತ್ ಸಂಬರಗಿ ಇನ್ನೊಂದು ಮಾತನಾಡುತ್ತಿರೋದು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

- Advertisement -

Latest News

error: Content is protected !!