Sunday, June 29, 2025
HomeUncategorizedಇನ್ಮೇಲೆ 8 ವರ್ಷ ಮೀರಿದ್ರೆ 1 ನೇ ತರಗತಿಗೆ ಪ್ರವೇಶ ನಿರ್ಬಂಧ; ಶಿಕ್ಷಣ ಇಲಾಖೆ ಆದೇಶ

ಇನ್ಮೇಲೆ 8 ವರ್ಷ ಮೀರಿದ್ರೆ 1 ನೇ ತರಗತಿಗೆ ಪ್ರವೇಶ ನಿರ್ಬಂಧ; ಶಿಕ್ಷಣ ಇಲಾಖೆ ಆದೇಶ

spot_img
- Advertisement -
- Advertisement -

ಬೆಂಗಳೂರು : ಇನ್ಮೇಲೆ 8 ವರ್ಷ ಮೀರಿದ್ರೆ 1 ನೇ ತರಗತಿಗೆ ಪ್ರವೇಶ ನಿರ್ಬಂಧ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಈ ಮೂಲಕ ರಾಜ್ಯದ ಶಾಲೆಗಳಲ್ಲಿ ಎಲ್‌ ಕೆಜಿ, ಯುಕೆಜಿ ಮತ್ತು 1 ನೇ ತರಗತಿಗೆ ಮಕ್ಕಳ ಪ್ರವೇಶಕ್ಕೆ ಎದುರಾಗುತ್ತಿದ್ದ ಗರಿಷ್ಠ ವಯೋಮಿತಿ ಗೊಂದಲಗಳಿಗೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ.

ಇನ್ಮೇಲೆ 8 ವರ್ಷ ಮೀರಿದ್ರೆ ವಯಸ್ಸಿಗೆ ಅನುಗುಣವಾಗಿ ಬೇರೆ ತರಗತಿಗೆ ಪ್ರವೇಶ ನೀಡಲು ನಿರ್ಧರಿಸಿದೆ. ಶೈಕ್ಷಣಿಕ ವರ್ಷ ಈಗಾಗಲೇ ಮುಕ್ತಾಯವಾಗಿದ್ದರೂ 2023-24 ರಿಂದ 2025-26ನೇ ವರ್ಷದವರೆಗೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ನಿಗದಿ ಮಾಡಿ ಗೊಂದಲಕ್ಕೆ ತೆರೆ ಎಳೆದಿದೆ.

ಸರ್ಕಾರದ ಆದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ-2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು  ನಿಗದಿಪಜಿಸಲಾಗಿದೆ.

- Advertisement -
spot_img

Latest News

error: Content is protected !!