Saturday, June 1, 2024
Homeಪ್ರಮುಖ-ಸುದ್ದಿಇಪ್ಪತ್ತು ವರ್ಷಗಳ ಬಳಿಕ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ರದ್ದು..!

ಇಪ್ಪತ್ತು ವರ್ಷಗಳ ಬಳಿಕ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ರದ್ದು..!

spot_img
- Advertisement -
- Advertisement -

ಬೆಂಗಳೂರು : ಸ್ವಾತಂತ್ರೋತ್ಸವದ ಅಂಗವಾಗಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಪ್ರತಿ ವರ್ಷ ಲಾಲ್ ಬಾಗ್ ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ವನ್ನು ಈ ಬಾರಿ ಕೊರೊನಾ ಭೀತಿಯಿಂದಾಗಿ ನಿಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರು ಅಧಿಕೃತವಾಗಿ ತಿಳಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದಕ್ಕಾಗಿ ಪ್ರದರ್ಶನ ರದ್ದು ಮಾಡುವುದೇ ಸೂಕ್ತ ಎಂಬ ಸಲಹೆಗಳು ಬಂದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಇಲಾಖೆ ಹೇಳಿದೆ. ಆಗಸ್ಟ್ ಮೊದಲ ವಾರದಲ್ಲಿ ಪ್ರದರ್ಶನ ಮಾಡಲಾಗುತ್ತಿತ್ತು. ಅದಕ್ಕೆ ಎರಡು ತಿಂಗಳ ಹಿಂದೆಯೇ ತಯಾರಿ ಕೆಲಸ ನಡೆಯತ್ತಿತ್ತು. ರಾಜ್ಯದಲ್ಲಿ ಕಳೆದ 8 ತಿಂಗಳಿಂದ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹಾಗಾಗಿ ಫಲಪುಷ್ಪ ಪ್ರದರ್ಶನ ನಿಲ್ಲಿಸಲಾಗಿದೆ.

ಬೆಂಗಳೂರಿನ ಲಾಲ್ ಬಾಗ್ ನಲ್ಲಿ 1912 ರಿಂದ ಫಲಪುಷ್ಟ ಪ್ರದರ್ಶನ ಆಯೋಜನೆ ಮಾಡಲಾಗುತ್ತಿದೆ. 1912 ರಿಂದ 2020ರವರೆಗೂ , ಅಂದರೇ ಒಟ್ಟು 108 ವರ್ಷಗಳಲ್ಲಿ ಮೂರು ಬಾರಿ ಫಲಪುಷ್ಪ ಪ್ರದರ್ಶನ ರದ್ದಾಗಿದೆ. 1942 ರಲ್ಲಿ ಎರಡನೇ ಮಹಾಯದ್ದ ನಡೆದ ಸಂದರ್ಭದಲ್ಲಿ ಮೊದಲ ಬಾರಿಗೆ ರದ್ದಾಗಿತ್ತು. 2000ರಲ್ಲಿ ಡಾ.ರಾಜುಕುಮಾರ್ ಅಪಹರಣವಾಗಿರುವ ಸಮಯದಲ್ಲಿ ಎರಡನೇ ಬಾರಿ ರದ್ದು ಮಾಡಲಾಗಿತ್ತು. ಇದೀಗ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸೋಂಕು ಹರಡುವಿಕೆ ತಡೆಯಲು ಮೂರನೇ ಬಾರಿ ಫಲಪುಷ್ಟ ಪ್ರದರ್ಶನ ರದ್ದು ಮಾಡಲಾಗಿದೆ. ಲಾಲ್ ಬಾಗ್ ನಲ್ಲಿ 20 ವರ್ಷಗಳ ಬಳಿಕ ಫಲಪುಷ್ಪ ಪ್ರದರ್ಶನ ಇಲ್ಲವಾಗಿದೆ

- Advertisement -
spot_img

Latest News

error: Content is protected !!