Wednesday, June 24, 2026
Homeತಾಜಾ ಸುದ್ದಿನಟಿ ಶೋಭಿತಾ ಶಿವಣ್ಣ ಮೃತದೇಹ ಹುಟ್ಟೂರಿಗೆ; ಇಂದೇ ಅಂತ್ಯಸಂಸ್ಕಾರ

ನಟಿ ಶೋಭಿತಾ ಶಿವಣ್ಣ ಮೃತದೇಹ ಹುಟ್ಟೂರಿಗೆ; ಇಂದೇ ಅಂತ್ಯಸಂಸ್ಕಾರ

- Advertisement -
- Advertisement -

ಹಾಸನ: ಕಿರುತೆರೆ ಧಾರವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಅವರ ಮೃತದೇಹವನ್ನ ಹುಟ್ಟೂರಾದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮಕ್ಕೆ ತರಲಾಗಿದೆ.

ಶೋಭಿತಾ ಅಂತ್ಯಸಂಸ್ಕಾರ ಹೆರೂರು ಗ್ರಾಮದಲ್ಲಿ ಇಂದೇ ನೆರವೇರಲಿದ್ದು,  ಅವರ ಅಂತ್ಯಸಂಸ್ಕಾರಕ್ಕೆ ನಿವಾಸದೆದುರು ವ್ಯವಸ್ಥೆ ಮಾಡಲಾಗಿದೆ. ಶೋಭಿತಾ ಮೃತದೇಹ ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಶೋಭಿತಾ ತಾಯಿ, ಮೂವರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!