Friday, May 3, 2024
Homeತಾಜಾ ಸುದ್ದಿಕನ್ನಡ ಸಿನಿಮಾರಂಗದಿಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್? ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ ಬಾಯ್ಕಾಟ್‌ ರಶ್ಮಿಕಾ ಪೋಸ್ಟರ್

ಕನ್ನಡ ಸಿನಿಮಾರಂಗದಿಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್? ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ ಬಾಯ್ಕಾಟ್‌ ರಶ್ಮಿಕಾ ಪೋಸ್ಟರ್

spot_img
- Advertisement -
- Advertisement -

ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣರನ್ನು ಕನ್ನಡ ಸಿನಿಮಾ ರಂಗದಿಂದಲೇ ಬ್ಯಾನ್‌ ಮಾಡಲಾಗ್ತಿದ್ಯಾ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ `ಕಿರಿಕ್ ಪಾರ್ಟಿ’ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಆಕ್ಷನ್ ಮಾಡಿ ತೋರಿಸಿದ್ದರು. ಅದಕ್ಕೆ ಪ್ರತಿಯುತ್ತರವಾಗಿ ರಿಷಬ್ ಕೂಡ ಟಾಂಗ್ ಕೊಟ್ಟಿದ್ದರು. ಆ ವೀಡಿಯೋ ಸಖತ್ ಟ್ರೋಲ್ ಕೂಡ ಆಗಿತ್ತು. ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ಮುಂದೆ ರಶ್ಮಿಕಾ ಸಿನಿಮಾ ಕನ್ನಡಿಗರು ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು ಎಂದು ಬಾಯ್ಕಾಟ್ ರಶ್ಮಿಕಾ ಎನ್ನುವ ಪೋಸ್ಟರ್‌ಗಳು ಹರಿದಾಡುತ್ತಿವೆ. ಕನ್ನಡ ನೆಲದಲ್ಲಿ ರಶ್ಮಿಕಾ ನಟನೆಯ ಸಿನಿಮಾ ಬ್ಯಾನ್ ಮಾಡಲಾಗುತ್ತೆ ಎನ್ನುವ ಸುದ್ದಿ ವೈರಲ್ ಆಗುತ್ತಿರುವ ಬೆನ್ನಲ್ಲೇ ರಶ್ಮಿಕಾ ನಟಿಸಿರುವ ಚಿತ್ರತಂಡಕ್ಕೆ ಭಯ ಶುರುವಾಗಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!