Friday, June 27, 2025
Homeತಾಜಾ ಸುದ್ದಿಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು : ಸಿಸಿಬಿಯಿಂದ ನೋಟಿಸ್ ಬರುತ್ತಿದ್ದಂತೆ ನಟಿ ರಾಗಿಣಿ ಎಸ್ಕೇಪ್

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು : ಸಿಸಿಬಿಯಿಂದ ನೋಟಿಸ್ ಬರುತ್ತಿದ್ದಂತೆ ನಟಿ ರಾಗಿಣಿ ಎಸ್ಕೇಪ್

spot_img
- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಡ್ರಗ್ಸ್ ಬಳಸುತ್ತಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಅಲ್ಲದೇ ನಟಿ ರಾಗಿಣಿ ಅವರ ಹೆಸರೂ ಕೂಡ ಈ ಪ್ರಕರಣದಲ್ಲಿ ಥಳುಕು ಹಾಕಿಕೊಂಡಿರೋದರಿಂದ ಅವರನ್ನು ಇವತ್ತು ವಿಚಾರಣೆ ಹಾಜರಾಗುವಂತೆ ಹೇಳಿ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು.ಆದರೆ ನೋಟಿಸ್ ನೀಡುತ್ತಿದ್ದಂತೆ ನಟಿ ರಾಗಿಣಿ ಎಸ್ಕೇಪ್ ಆಗಿದ್ದಾರೆ. ಸಿಸಿಬಿ ಅಧಿಕಾರಿಗಳು ಕರೆ ಮಾಡಿದ್ರೂ ನಟಿ ಕರೆ ಸ್ವೀಕರಿಸಿಲ್ಲ. ವಿಚಾರಣೆಗೆ ಹೆದರಿ ರಾಗಿಣಿ ತಲೆ ಮರೆಸಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಹಾಗಾಗಿ ಸಿಸಿಬಿ ಅಧಿಕಾರಿಗಳು ವಾಟ್ಸಾಫ್ ಮೆಸೇಜ್ ಮೂಲಕ ರಾಗಿಣಿ ಅವರಿಗೆ ನೊಟೀಸ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾತ್ರಿ 11 ಗಂಟೆಗೆ ರಾಗಿಣಿ ಮನೆಯಿಂದ ಹೊರ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲವೆಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಯಲಹಂಕದಲ್ಲಿರುವ ನಿವಾಸದಿಂದ ರಾಗಿಣಿ 11 ಗಂಟೆಗೆ ಹೊರ ಹೋಗಿದ್ದಾರೆ ಎನ್ನಲಾಗಿದೆ. ಸೆಕ್ಯೂರಿಟಿ ಗಾರ್ಡ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಗಿಣಿ ವಿಚಾರಣೆಗೆ ಹಾಜರಾಗದೆ ಸ್ನೇಹಿತರ ಮನೆಗೆ ತೆರಳಿರಬಹುದೆಂದು ಹೇಳಲಾಗಿದೆ.

ಇಂದು ಬೆಳಗ್ಗೆ 10 ಗಂಟೆಗೆ ಅವರು ವಿಚಾರಣೆಗೆ ಹಾಜರಾಗಬೇಕಿದೆ. ಅವರು ಕಾರಣ ಹೇಳಿ ಮುಂದಿನ ದಿನಾಂಕದಲ್ಲಿ ವಿಚಾರಣೆಗೆ ಹಾಜರಾಬಹುದು. ಈ ನಡುವೆ ಕಾನೂನು ಸಲಹೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇದೆಲ್ಲದರ ಮಧ್ಯೆ ರಾಗಿಣಿ ತಪ್ಪು ಮಾಡಿಲ್ಲ ಅಂದ್ರೆ ಅವರು ವಿಚಾರಣೆಗೆ ಹಾಜರಾಗಬಹುದಿತ್ತು. ಈ ರೀತಿ ಮಾಡಿದ್ರೆ ಅವರ ಮೇಲಿನ ಅನುಮಾನ ಇನ್ನಷ್ಟು ಹೆಚ್ಚಾಗಲ್ವಾ ಅನ್ನೋ ಮಾತುಗಳು ಕೇಳಿ ಬುತ್ತಿವೆ.

- Advertisement -
spot_img

Latest News

error: Content is protected !!