- Advertisement -
![]()
- Advertisement -
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಾದ ನಟಿ ರಾಗಿಣಿ ಹಾಗೂ ಸಂಜನಾ ಕಥೆಯಲ್ಲೀಗ ಹೊಸ ತಿರುವು ದೊರೆತಿದೆ. ಡ್ರಗ್ಸ್ ಪಾರ್ಟಿಗಳಿಗೆ ಭೂಗತ ಲೋಕದ ನಂಟಿದೆ ಎಂಬ ಮಾಹಿತಿ ಇದೀಗ ಬಯಲಾಗಿದೆ.ಇವರು ಹೋಗುತ್ತಿದ್ದ ಮಿಡ್ ನೈಟ್ ಪಾರ್ಟಿಗಳಿಗೆ ಅಂಡರ್ ವರ್ಲ್ಡ್ ಡಾನ್ ಗಳು, ರೌಡಿ ಶೀಟರ್ ಗಳು ಕೂಡ ಭಾಗಿಯಾಗುತ್ತಿದ್ದರು. ಪಾರ್ಟಿಗಳಲ್ಲಿ ಮಾನಿನಿಯರ ಸಪ್ಲೈ ಕೂಡ ಆಗುತ್ತಿತ್ತು.
ಈ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿರುವ ಸಿಸಿಬಿ, ರೌಡಿ ಶೀಟರ್ ಗಳಾದ ಇಫ್ತಿಯಾಜ್ ಪೈಲ್ವಾನ್, ಮಸೂರ್ ಅಲಿಯಾಸ್ ಮಸ್ಸಿ ಸೇರಿದಂತೆ ಹಲವು ರೌಡಿಗಳು ಭಾಗಿಯಾಗುತ್ತಿದ್ದರು.ಈ ಪಾರ್ಟಿ ಮುಗಿದ ಬಳಿಕ ಬೆಂಗಳೂರಿನ ಹೊರವಲಯಗಳಲ್ಲಿ ಆಫ್ಟರ್ ಪಾರ್ಟಿ ನಡೆಯುತ್ತಿತ್ತು. ಇಲ್ಲಿ ಅನೈತಿಕ ಚಟುವಟಿಕೆಗಳು ಕೂಡ ನಡೆಯುತ್ತಿದ್ದವು ಎಂದು ಮಾಹಿತಿ ನೀಡಿದೆ.
- Advertisement -


