Friday, June 5, 2026
Homeಕರಾವಳಿಉಡುಪಿಉಡುಪಿ ಶ್ರೀಕೃಷ್ಣ ಮಠಕ್ಕೆ ಪೂಜಾ ಗಾಂಧಿ ದಂಪತಿ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ಪೂಜಾ ಗಾಂಧಿ ದಂಪತಿ ಭೇಟಿ

- Advertisement -
- Advertisement -

ಉಡುಪಿ: ಚಲನಚಿತ್ರ ನಟಿ ಪೂಜಾ ಗಾಂಧಿ ಇಂದು ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.

ವಿವಾಹದ ಬಳಿಕ ಮೊದಲ ಬಾರಿಗೆ ಶ್ರೀ ಕೃಷ್ಣ ಮಠಕ್ಕೆ ನಟಿ ಪೂಜಾ ಗಾಂಧಿ ದಂಪತಿ ಭೇಟಿ ನೀಡಿದ್ದು, ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಪಡೆದಿದ್ದಾರೆ.

ನಂತರ ಕಾಣಿಯೂರು ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿದ ಪೂಜಾ ಗಾಂಧಿ ದಂಪತಿ ವಿದ್ಯಾವಲ್ಲಭ ಶ್ರಿಪಾದರ ಆಶೀರ್ವಾದ ಪಡೆದುಕೊಂಡರು‌.

ಪೂಜಾ ಗಾಂಧಿ ದಂಪತಿ ನಾಲ್ಕು ದಿನಗಳಿಂದ ಕರಾವಳಿ ಪ್ರವಾಸ ಕೈಗೊಂಡಿದ್ದಾರೆ.

- Advertisement -

Latest News

error: Content is protected !!