Saturday, June 6, 2026
Homeತಾಜಾ ಸುದ್ದಿ'ಡೇಂಜರಸ್' ಬ್ಯೂಟಿ ನತಾಶಾ ಸೂರಿಗೆ ಕೊರೋನಾ ಸೋಂಕು ದೃಢ

‘ಡೇಂಜರಸ್’ ಬ್ಯೂಟಿ ನತಾಶಾ ಸೂರಿಗೆ ಕೊರೋನಾ ಸೋಂಕು ದೃಢ

- Advertisement -
- Advertisement -

ಮುಂಬೈ: ನಟಿ ನತಾಶಾ ಸೂರಿಗೆ ಕೊರೊನಾ ವಕ್ಕರಿಸಿದೆ. ಒಂದು ವಾರದ ಹಿಂದೆ ನಾನು ಕೆಲವು ತುರ್ತು ಕೆಲಸಕ್ಕಾಗಿ ಪುಣೆಗೆ ಹೋಗಿದ್ದೆ, ಹಿಂದಿರುಗಿದ ನಂತರ ಅನಾರೋಗ್ಯಕ್ಕೆ ಒಳಗಾದೆ. ಜ್ವರ ಮತ್ತು ಗಂಟಲು ನೋವು ಕಾಣಿಸಿತು, ಮೂರು ದಿನಗಳ ಹಿಂದೆ ಪರೀಕ್ಷೆಗೆ ಒಳಗಾಗಿದ್ದ ಈ ಸಂದರ್ಭದಲ್ಲಿ ಕೋವಿಡ್ ಇರುವುದು ಖಚಿತವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಸ್ತುತ ನಾನು ಹೋಂ ‌ಕ್ವಾರಂಟೈನ್ ನಲ್ಲಿ ಇದ್ದೇನೆ. ಜೊತೆಗೆ ಜ್ವರ ಮತ್ತು ಸುಸ್ತು ಇನ್ನೂ ಇದೆ. ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ನನ್ನೊಂದಿಗೆ ಅಜ್ಜಿ ಹಾಗೂ ಸಹೋದರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ತಾವು ನಟಿಸಿದ ಚಲನಚಿತ್ರ ʼಡೇಂಜರಸ್ʼ ನ ಪ್ರಮೋಷನ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ದೂರ ಉಳಿಯಲು ಅವರು ನಿರ್ಧರಿಸಿದ್ದಾರೆ. ಈ ಚಿತ್ರ ಮ್ಯಾಕ್ಸ್ ನಲ್ಲಿ ಬಿಡುಗಡೆಯಾಗಲಿದೆ.

- Advertisement -

Latest News

error: Content is protected !!