Monday, June 29, 2026
Homeತಾಜಾ ಸುದ್ದಿನಾನು ಸಾಯುತ್ತಿದ್ದೇನೆ ಎಂದು ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿ ಸಾವನ್ನಪ್ಪಿದ ಖ್ಯಾತ ನಟಿ

ನಾನು ಸಾಯುತ್ತಿದ್ದೇನೆ ಎಂದು ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿ ಸಾವನ್ನಪ್ಪಿದ ಖ್ಯಾತ ನಟಿ

- Advertisement -
- Advertisement -

ನವದೆಹಲಿ: ಸಿನಿಮಾ, ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತ ನಟಿ ದಿವ್ಯಾ ಚೌಕ್ಸಿ ಇಂದು ಕ್ಯಾನ್ಸರ್‌ನಿಂದ ಮೃತವಾಗಿದ್ದಾರೆ.

ಹೇ ದಿಲ್‌ ತೊ ಆವಾರಾ ಸಿನಿಮಾದಲ್ಲಿ ನಟಿಸಿದ್ದ ನಟಿ ಕೆಲವು ತಿಂಗಳಿನಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು. ಆದರೆ ದುರಂತ ಎಂಬಂತೆ ದಿವ್ಯಾ ತಾನು ಸಾಯುವ ಕೆಲವೇ ಹೊತ್ತಿನ ಮುನ್ನಾ ತಮ್ಮದೇ ಸಾವಿನ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

‘ನಾನು ಮರಣಶಯ್ಯೆಯಲ್ಲಿದ್ದೀನಿ, ಮುಂದಿನ ಜನ್ಮದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ಮುಂದಿನ ಜನ್ಮವಾದರೂ ನೋವಿಲ್ಲದ ಜನ್ಮವಾಗಲಿ’ ಎಂದು ಇನ್‌ಸ್ಟಾಗ್ರಾಂ ನಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ.

ದಿವ್ಯಾ ಚೌಕ್ಸಿ ಸಾವಿಗೆ ಹಲವು ಟಿವಿ ನಟ-ನಟಿಯರು ಬೇಸರ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

- Advertisement -

Latest News

error: Content is protected !!