Monday, June 8, 2026
Homeತಾಜಾ ಸುದ್ದಿಮಾದಕ ವಸ್ತು ಖರೀದಿಸುತ್ತಿದ್ದಾಗಲೇ ನಟಿಯನ್ನು ಬಂಧಿಸಿದ ಪೊಲೀಸರು

ಮಾದಕ ವಸ್ತು ಖರೀದಿಸುತ್ತಿದ್ದಾಗಲೇ ನಟಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮುಂಬೈ: ಡ್ರಗ್ಸ್ ಜಾಲ ಇಡೀ ದೇಶವನ್ನೇ ವ್ಯಾಪಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬೊಬ್ಬರ ಹೆಸರುಗಳು ಹೊರಗೆ ಬರುತ್ತಲೇ ಇದೆ. ಇದೀಗ ಮಾದಕವಸ್ತುವನ್ನು ಖರೀದಿಸುತ್ತಿದ್ದ ಸಂದರ್ಭದಲ್ಲೇ ನಟಿ, ಟಿವಿ ಆಂಕರ್ ಪ್ರೀತಿಕಾ ಚೌವ್ಹಾಣ್ ರನ್ನು ಮುಂಬೈನ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ

ಇನ್ನು, ಬಂಧಿತ ಆರೋಪಿಯನ್ನು ಅಧಿಕಾರಿಗಳು ಕಿಲ್ಲೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಟಿಯು ಸಾವಧಾನ್ ಇಂಡಿಯಾ, ದೇವೋ ಕಿ ದೇವ್ ಮಹಾದೇವ್ ಸೇರಿದಂತೆ ಕೆಲವು ಹಿಂದಿ ಧಾರಾವಾಹಿಗಳನ್ನಿ ನಟಿಸುತ್ತಿದ್ದರು ಎಂದು ತಿಳಿದು ಬಂದಿದೆ. ವರ್ಸೋವಾ ಮತ್ತು ಮುಂಬೈನಲ್ಲಿ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಮಫ್ತಿನಲ್ಲಿದ್ದ ಅಧಿಕಾರಿಗಳು ಇದುವರೆಗೂ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು  ಮಾದಕ ವಸ್ತುಗಳ ನಿಯಂತ್ರಣಕ್ಕೆ ಎನ್ ಸಿಬಿ ಹೆಚ್ಚಿನ ನಿಗಾ ವಹಿಸಿದೆ. ಬಾಲಿವುಡ್ ನಲ್ಲಿ ಅನೇಕ ನಟ-ನಟಿಯರು ಸೇರಿದಂತೆ ಹಲವನ್ನು ಬಂಧಿಸಿರುವ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮಾದರ ವಸ್ತುಗಳ ಪೂರೈಕೆ, ಮಾರಾಟ, ಮಧ್ಯವರ್ತಿಗಳು ಮತ್ತು ಗ್ರಾಹಕರ ಮೇಲೆ ಅಧಿಕಾರಿಗಳ ತಂಡವು ಹದ್ದಿನ ಕಣ್ಣಿಟ್ಟಿದೆ.

- Advertisement -

Latest News

error: Content is protected !!