- Advertisement -
- Advertisement -
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ತಂಡ ಹುಲಿ ಕುಣಿತದಲ್ಲಿ ಪಾಲ್ಗೊಂಡಿದೆ.ಮಲ್ಪೆ ಕೊಳ ಪರಿಸರದಲ್ಲಿ ಆಯೋಜನೆಯಾಗಿದ್ದ ಹುಲಿ ವೇಷ ಸ್ಪರ್ಧೆಯಲ್ಲಿ ನಟ ರಕ್ಷಿತ್ ಹುಲಿ ಕುಣಿತದ ಬೀಟ್ ಗೆ ನೃತ್ಯ ಮಾಡಿದ್ದಾರೆ.
ತಾಸೆಯ ಶಬ್ದಕ್ಕೆ ರಕ್ಷಿತ್ ಶೆಟ್ಟಿ ಭರ್ಜರಿಯಾಗಿ ನೃತ್ಯ ಮಾಡಿದ್ದು, ಚಿತ್ರ ತಂಡ ಕೂಡಾ ಹೆಜ್ಜೆ ಹಾಕಿ ಖುಷಿ ಪಟ್ಟಿದೆ.ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಚಲನಚಿತ್ರದ ನಾಯಕಿ ನಟಿ ರುಕ್ಮಿಣಿ ವಸಂತ್ ಹಾಗೂ ನಿರ್ದೇಶಕ ಹೇಮಂತ್ ಕೂಡಾ ಪಾಲ್ಗೊಂಡಿದ್ದರು.
- Advertisement -