- Advertisement -
- Advertisement -
ತಿರುವನಂತಪುರಂ: ಚಿತ್ರೀಕರಣ ನಡೆಯುತ್ತಿದ್ದ ವೇಳೆ ಮಲಯಾಳಂ ನಟ ಪ್ರಬೀಶ್ ಚಕ್ಕಲಕ್ಕಲ್ (44) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದೆ . ಕೊಚ್ಚಿನ್ ಕೊಲಾಜ್ ಚಿತ್ರೀಕರಣ ನಡೆಯುತ್ತಿದ್ದಾಗ ನಟ ಪ್ರಬೇಶ್ ಇದ್ದಕ್ಕಿದ್ದಂತೆ ಸೆಟ್ನಲ್ಲೇ ಕುಸಿದು ಬಿದ್ದಿದ್ದಾರೆ . ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ . ಆದರೆ ಆಸ್ಪತ್ರೆಗೆ ಹೋಗುವ ಮೊದಲೇ ನಟ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.

ಪ್ರಬೀಶ್ ಅನೇಕ ಟೆಲಿಫಿಲ್ಮ್ ಗಳಲ್ಲಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದರು. ಅಲ್ಲದೇ ಅನೇಕ ಮಲಯಾಳಂ ಚಿತ್ರಗಳಲ್ಲಿ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದರು. ಪ್ರಬೀಶ್ ತಂದೆ ಜೋಸೆಫ್, ಪತ್ನಿ ಜಾನ್ಸಿ ಮತ್ತು ಮಗಳು ತಾನಿಯಾಳನ್ನು ಅಗಲಿದ್ದಾರೆ.
- Advertisement -