Wednesday, June 26, 2024
Homeತಾಜಾ ಸುದ್ದಿಹಿಂದಿ ಚಿತ್ರರಂಗದ ಖ್ಯಾತ ಹಾಸ್ಯನಟ 'ಜಗದೀಪ್' ಇನ್ನಿಲ್ಲ

ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯನಟ ‘ಜಗದೀಪ್’ ಇನ್ನಿಲ್ಲ

spot_img
- Advertisement -
- Advertisement -

ಮುಂಬೈ : ಬಾಲಿವುಡ್ ನ ಹಿರಿಯ ಹಾಸ್ಯನಟ ಜಗದೀಪ್ (81) ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ತನ್ನ ಮೂಲ ಹೆಸರು ಸಯ್ಯದ್ ಇಫ್ತಿಯಾಕ್ ಅಹ್ಮದ್ ಜಫ್ರಿ, ಆದರೆ ಅವರು ಚಿತ್ರರಂಗದಲ್ಲಿ ಜಗದೀಪ್ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು.

ಮುಂಬೈಯ ಬಾಂದ್ರಾದಲ್ಲಿನ ನಿವಾಸದಲ್ಲಿ ನಿಧನರಾಗಿದ್ದಾರೆ. ನಟ ಜಾವೇದ್‌ ಜಾಫ್ರಿ ಇವರ ಪುತ್ರರಾಗಿದ್ದಾರೆ.

ಜಗದೀಪ್ ಅವರು ಸುಮಾರು 400 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1975 ರಲ್ಲಿ ಅಮಿತಾಭ್ ಬಚ್ಚನ್ ಅವರ ಶೋಲೆ ಸಿನಿಮಾದಲ್ಲಿ ಸೂರ್ಮಾ ಭೋಪಾಲಿ ಪಾತ್ರದಲ್ಲಿ ನಟಿಸಿದ್ದರು.

400 ಕ್ಕೂ ಅಧಿಕ ಚಿತ್ರಗಳಲ್ಲಿ ಜಗದೀಪ್‌ ಅಭಿನಯಿಸಿದ್ದು, 2012 ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡಿದ್ದ ಅಕ್ಷಯ್‌ ಖನ್ನಾ, ಶ್ರೀಯಾ ಸರಣ್‌ ಹಾಗೂ ಮುಗುದ ಗೋಡ್ಸೆ ಅಭಿನಯದ ʼಗಲಿ ಗಲಿ ಚೋರ್‌ ಹೈʼ ಜಗದೀಪ್‌ ಅಭಿನಯದ ಕೊನೆಯ ಚಿತ್ರವಾಗಿತ್ತು.

- Advertisement -
spot_img

Latest News

error: Content is protected !!