Thursday, June 25, 2026
Homeತಾಜಾ ಸುದ್ದಿಮಂಗಳೂರು: ನಟ ಚೇತನ್‌ ಹೇಳಿಕೆ ತಪ್ಪು: ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಬೇಡಿ: ದಯಾನಂದ ಕತ್ತಲ್...

ಮಂಗಳೂರು: ನಟ ಚೇತನ್‌ ಹೇಳಿಕೆ ತಪ್ಪು: ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಬೇಡಿ: ದಯಾನಂದ ಕತ್ತಲ್ ಸಾರ್

- Advertisement -
- Advertisement -

ಮಂಗಳೂರು: ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಕಾಂತಾರ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಹೇಳಿಕೆ ಮಹತ್ವ ಪಡೆದುಕೊಂಡಿತ್ತು. ಈ ಮಾತಿಗೆ ವಿರೋಧ ಎನ್ನುವಂತೆ ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ನೀಡಿದ್ದರು. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ವಿರೋಧಿಸಿದ್ದರು. ಈ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಇದೀಗ ದೈವ ನರ್ತಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ನಟ ಚೇತನ್‌ ಹೇಳಿಕೆಯನ್ನು ಖಂಡಿಸಿದ್ದಾರೆ.

ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ನಟ ಚೇತನ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದು ಶೋಷಿತರ ಮೇಲಾಗುವ ತುಳಿತ. ದೈವಾರಾಧನೆ ಮಾಡುವ ನಲಿಕೆ, ಪಂಬಂದ, ಪರವ ಸಮುದಾಯವರು ಹಿಂದೂ ಧರ್ಮದವರೆಂದೇ ದಾಖಲೆಗಳಲ್ಲಿದೆ. ಚೇತನ್ ಯಾರು ನಮಗೆ ಸರ್ಟಿಫಿಕೇಟ್ ಕೊಡುವುದಕ್ಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ದೈವಾರಾಧನೆಯಲ್ಲಿ ಹದಿನಾರು ಸಮುದಾಯಗಳಿವೆ. ಎಲ್ಲರೂ ಸಮಾನರೇ ಆಗಿದ್ದಾರೆ. ನಟ ಚೇತನ್‌ ಹೇಳಿಕೆ ತಪ್ಪು. ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!