Tuesday, May 21, 2024
HomeUncategorizedಬೆಂಗಳೂರು: ಬೀದಿನಾಯಿ ಮೇಲೆ ಆಸಿಡ್ ಸುರಿದ ಪಾಪಿಗಳು; ಐವರ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು: ಬೀದಿನಾಯಿ ಮೇಲೆ ಆಸಿಡ್ ಸುರಿದ ಪಾಪಿಗಳು; ಐವರ ವಿರುದ್ಧ ಎಫ್ ಐಆರ್ ದಾಖಲು

spot_img
- Advertisement -
- Advertisement -

ಬೆಂಗಳೂರು: ಬೀದಿ ನಾಯಿಯನ್ನು ಥಳಿಸಿ ಅದರ ಮೇಲೆ ಆಸಿಡ್ ಸುರಿದ ಘಟನೆ ನಗರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಮಾ.4 ರಂದು ಆರೋಪಿಗಳು ಬೀದಿ ನಾಯಿಯನ್ನು ಕಟ್ಟಿ ಹಾಕಿ ವಿನಾಕಾರಣ ಥಳಿಸಿದ್ದಾರೆ. ಆನಂತ ಆಸಿಡ್ ಮತ್ತು ಪೆಟ್ರೋಲ್ ಎರಚಿದ್ದಾರೆ ಎನ್ನಲಾಗಿದೆ.


ಈ ಘಟನೆ ನಡೆಯುವ ವೇಳೆ 50 ವರ್ಷದ ಮಹಿಳೆಯೊಬ್ಬರು ಪ್ರಶ್ನಿಸಿದಾಗ, ಅವರಿಗೆ ಬೆದರಿಕೆ ಹಾಕಿದ್ದಾರೆ. ಆಗ ಆ ಮಹಿಳೆ ಸಾಮಾಜಿಕ ಕಾರ್ಯಕರ್ತೆಯೊಬ್ಬರ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಗೊಂಡ 5 ವರ್ಷದ ಗಂಡು ನಾಯಿಯನ್ನು ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

- Advertisement -
spot_img

Latest News

error: Content is protected !!