Friday, May 17, 2024
Homeಕರಾವಳಿಉಡುಪಿಉಡುಪಿ: ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಾರೆಂಟ್ ಆರೋಪಿ

ಉಡುಪಿ: ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಾರೆಂಟ್ ಆರೋಪಿ

spot_img
- Advertisement -
- Advertisement -

ಡುಪಿ: ಕೀಟ ನಾಶಕ ಸೇವಿಸಿ ವಾರೆಂಟ್ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಲ್ಕಿಯಲ್ಲಿ ನಡೆದಿದೆ.ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಅಪರಾಧ ಪ್ರಕರಣವೊಂದರ ಆರೋಪಿಯಾಗಿದ್ದ ಮಂಗಳೂರಿನ ಮುಚ್ಚೂರು ಗ್ರಾಮದ ಕರುಣಾಕರ ಶೆಟ್ಟಿ (44) ವಿರುದ್ದ ನ್ಯಾಯಲಯದ ವಾರೆಂಟ್ ಜಾರಿ ಮಾಡಿತ್ತು.

ಕರುಣಾಕರ ಶೆಟ್ಟಿ ಉಡುಪಿಯಲ್ಲಿರುವ ಬಾರೊಂದರಲ್ಲಿ ಕೆಲಸ ಮಾಡಿಕೊಂಡಿರುವ ಬಗೆಗಿನ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಗುರುಪ್ಪ ಕಾಂತಿ ಮತ್ತು ಸಿಬ್ಬಂದಿ ಆ. 24 ರಂದು ಸಂಜೆ ವಾರಂಟ್ ಆದೇಶ ಕಾರ್ಯಗತಗೊಳಿಸಿ ಉಡುಪಿಗೆ ಆಗಮಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಆತ ಕೆಲಸ ಮಾಡಿಕೊಂಡಿರುವ ಬಾರ್ ಗೆ ಬಂದಿದ್ದರು.

ಪೊಲೀಸರು ವಶಕ್ಕೆ ಪಡೆಯುವ ಸಮಯ ತಾನು ಬಟ್ಟೆ ಹಾಕಿಕೊಂಡು ಬರುವುದಾಗಿ ಬಾರ್‌ ನ ಮೇಲೆ ಇರುವ ರೂಮಿನೊಳಗೆ ಹೋದ ಕರುಣಾಕರ ಯಾವುದೋ ಕೀಟನಾಶಕ ಸೇವನೆ ಮಾಡಿದ್ದಾನೆ. ಪರಿಣಾಮ ವಾಹನದಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅಸ್ವಸ್ಥಗೊಂಡಿದ್ದು, ಬಜಪೆ ಪೊಲೀಸ್ ಠಾಣಾ ಉಪನಿರೀಕ್ಷಕರು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಕೊಡಿಸಿ ಅನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!