Sunday, May 19, 2024
Homeಕರಾವಳಿಉಡುಪಿಕುಂದಾಪುರ: ಪರಿಶಿಷ್ಟ ಪಂಗಡದ ಹಣ ದುರುಪಯೋಗದ ಆರೋಪ: ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಅಹೋರಾತ್ರಿ...

ಕುಂದಾಪುರ: ಪರಿಶಿಷ್ಟ ಪಂಗಡದ ಹಣ ದುರುಪಯೋಗದ ಆರೋಪ: ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ

spot_img
- Advertisement -
- Advertisement -

ಕುಂದಾಪುರ: ಪರಿಶಿಷ್ಟ ಪಂಗಡದ ಹಣ ದುರುಪಯೋಗ ಆಗಿದೆ ಎಂದು ಆರೋಪಿಸಿ ನಡೆಯುತ್ತಿರುವ ಧರಣಿ ಅಹೋರಾತ್ರಿ ನಡೆದಿದೆ. ಉಡುಪಿ ಜಿಲ್ಲಾ ಅರ್ ಟಿ ಐ ಕಾರ್ಯಕರ್ತರು ಹಾಗೂ ದಲಿತ ಸಂಘರ್ಷ ಸಮಿತಿ ಭೀಮಾವಾದ ಕಾರ್ಯಕರ್ತರು ಈ ಧರಣಿ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ ಪ್ರತಿಭಟನಕಾರರು ಅರಣ್ಯ ಸಂರಕ್ಷಣಾಧಿಕಾರಿ ಮತ್ತಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು. ಕರ್ಜೆಯಲ್ಲಿ ಒಂದೇ ಮನೆಗೆ ಹೋಗುವ ರಸ್ತೆಗೆ ಎರಡು ಕೋಟಿ ಹಣ ಬಿಡುಗಡೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಾತ್ರವಲ್ಲ , ಮೀಸಲು ಅರಣ್ಯ ಕಡಿದು ಗುತ್ತಿಗೆದಾರ ಕಂ ಕ್ರಶರ್ ಮಾಲೀಕ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣದಲ್ಲಿ ರಸ್ತೆ ನಿರ್ಮಿಸಿರುವುದನ್ನು ವಿರೋಧಿಸಿ ನಿನ್ನೆಯಿಂದ ಪ್ರತಿಭಟನೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!