Tuesday, June 9, 2026
Homeಕರಾವಳಿಮಂಗಳೂರು :  ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಹಿಂದೂ ಯುವತಿಯೊಂದಿಗೆ ಬೆಂಗಳೂರಿಗೆ ತೆರಳಲು ಯತ್ನ ಆರೋಪ;...

ಮಂಗಳೂರು :  ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಹಿಂದೂ ಯುವತಿಯೊಂದಿಗೆ ಬೆಂಗಳೂರಿಗೆ ತೆರಳಲು ಯತ್ನ ಆರೋಪ; ಅನ್ಯಕೋಮಿನ ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ

- Advertisement -
- Advertisement -

ಮಂಗಳೂರು : ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಹಿಂದೂ ಯುವತಿಯೊಂದಿಗೆ ಬೆಂಗಳೂರಿಗೆ ತೆರಳಲು ಯತ್ನಿಸಿದ  ಅನ್ಯಕೋಮಿನ ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅನ್ಯಕೋಮಿನ ಯುವಕನೋರ್ವ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಹಿಂದೂ ಯುವಕನಂತೆ ನಟಿಸಿ ಚಿಕ್ಕಮಂಗಳೂರಿನ ಹಿಂದೂ ಯುವತಿಯೊಬ್ಬಳೊಂದಿಗೆ ಗಳೂರಿಗೆ ತೆರಳಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ  ಮಾಹಿತಿ ತಿಳಿದ ಭಜರಂಗದಳ ಕಾರ್ಯಕರ್ತರು ಅಲರ್ಟ್ ಆಗಿ, ಮಂಗಳೂರಿನ ನಾಗುರಿಯಲ್ಲಿ ಬಸ್ ತಡೆದು, ಆ ಯುವಕನನ್ನು ಬಸ್ ನಿಂದ ಎಳೆದು ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.  ಹಲ್ಲೆಗೊಳಗಾದ ಯುವಕ  ಬಿಸಿರೋಡ್ ಸಮೀಪದವನು ಅನ್ನೋ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ನಾಲ್ವರು ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

- Advertisement -

Latest News

error: Content is protected !!