Wednesday, July 15, 2026
Homeಅಪರಾಧಪ್ರೀತಿಯ ನೆಪದಲ್ಲಿ ಯುವತಿಗೆ ವಂಚನೆ, ಬೆದರಿಕೆ ಆರೋಪ; ಪ್ರಕರಣ ದಾಖಲು

ಪ್ರೀತಿಯ ನೆಪದಲ್ಲಿ ಯುವತಿಗೆ ವಂಚನೆ, ಬೆದರಿಕೆ ಆರೋಪ; ಪ್ರಕರಣ ದಾಖಲು

- Advertisement -
- Advertisement -

ಬ್ರಹ್ಮಾವರ: ಪ್ರೀತಿಯ ನೆಪದಲ್ಲಿ ಹೆಗ್ಗುಂಜೆ ಪಡುಬಾರಾಳಿಯ ಮಾಧವ ವಂಚಿಸಿರುವುದಾಗಿ ಬ್ರಹ್ಮಾವರದ ಯುವತಿ ದೂರು ನೀಡಿದ್ದಾರೆ.

ಮಾಧವ ಮದುವೆಯಾಗು ವುದಾಗಿ ನಂಬಿಸಿ ನನಗೆ ಸಾಲ ಇದೆ, ವಾಹನ ಖರೀದಿಸಲು ಇದೆ ಎಂದು 2,06,903 ರೂ.ಗಳನ್ನು ಗೂಗಲ್ ಪೇ ಮೂಲಕ ಪಡೆದಿದ್ದನು. ಸುಮಾರು 80 ಸಾವಿರ ರೂ. ಮೌಲ್ಯದ ನಗದು, ಚಿನ್ನದ ಸರ ಮತ್ತು ಸಿಮ್ ಕಾರ್ಡ್ ಕೂಡ ಪಡೆದುಕೊಂಡಿದ್ದನು. ಇದುವರೆಗೆ ವಾಪಸ್ ನೀಡದೆ ವಂಚಿಸಿದ್ದಾನೆ.

2023ರ ಮೇಯಲ್ಲಿ ಆರೋಪಿಯು ಬೇರೆ ಯುವತಿಯೊಂದಿಗೆ ಮದುವೆ ಯಾಗಿದ್ದರೂ ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದೂ ಹೇಳುತ್ತಿದ್ದು, ಸಂದೇಶ ಕಳುಹಿಸಿ ಬೆದರಿಕೆ ಹಾಕುತ್ತಿದ್ದ. ನಂಬರ್ ಬ್ಲಾಕ್ ಮಾಡಿದ ಅನಂತರವೂ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕಿಸಿ ನನ್ನ ವಿರುದ್ಧ ದೂರು ನೀಡಿದರೆ ಫೋಟೊವನ್ನು ಕಟೌಟ್ ಮಾಡಿ ಊರು ತುಂಬಾ ಹಾಕುತ್ತೇನೆ, ಮನೆಗೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದು, ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾರೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!