Thursday, June 4, 2026
Homeಕರಾವಳಿಕಾಸರಗೋಡಿನಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದವನ ಬಂಧನ:  13ನೇ ವರ್ಷದಲ್ಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಆರೋಪಿ

ಕಾಸರಗೋಡಿನಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದವನ ಬಂಧನ:  13ನೇ ವರ್ಷದಲ್ಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಆರೋಪಿ

- Advertisement -
- Advertisement -

ಕಾಸರಗೋಡು: ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಅಲಂಪಾಡಿ ನಿವಾಸಿ ಅಮೀರ್‌ ಅಲಿ(23) ಬಂಧಿತ ಆರೋಪಿ.

ಈತ ನಂಬ್ರ ಪ್ಲೇಟ್‌ ಇಲ್ಲದ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಚೆಡೇಕಲ್‌ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ 8.640 ಗ್ರಾಂ ಎಂಡಿಎಂಎ ಅಲ್ಲದೆ ರಿವಾಲ್ವರ್‌ ರೀತಿಯ ಅಕ್ರಮ ಕೋವಿ ಹಾಗು ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈತನ ವಿರುದ್ಧ ಕಾಸರಗೋಡು, ವಿದ್ಯಾನಗರ, ಬೇಕಲ, ಕಾಂಞಂಗಾಡ್‌, ಪಯ್ಯನ್ನೂರು ಹಾಗೂ ಕರ್ನಾಟಕದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 100ಕ್ಕೂ ಅಧಿಕ ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಸಾಗಾಟ, ಕಳವು, ಬೆದರಿಕೆ, ದರೋಡೆ, ಕೊಲೆಯತ್ನ ಮೊದಲಾದ ಪ್ರಕರಣಗಳು ದಾಖಲಾಗಿವೆ. ಈತ 13ನೇ ವರ್ಷದಲ್ಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದನೆಂದು ಪೊಲೀಸರು ಹೇಳಿದ್ದಾರೆ.

- Advertisement -

Latest News

error: Content is protected !!