ಮಂಗಳೂರು; ವಾಟ್ಸಾಪ್‌ನಲ್ಲಿ ಕೋಮುದ್ವೇಷ ಮತ್ತು ಸುಳ್ಳು ಆರೋಪಗಳ ಪ್ರಚಾರ ಮಾಡಿದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ) ರಾಮ್ ಪ್ರಸಾದ್ @ ಪೋಚ (42) ಬಂಧಿತ ಆರೋಪಿ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಪ್ರಸಕ್ತ ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ ಸುರತ್ಕಲ್ ಕೋಡಿಕೆರೆ ನಿವಾಸಿ ಲೋಕೇಶ್ ಎಂಬಾತನನ್ನು ಬಾಡಿ ವಾರೆಂಟ್ ಪಡೆದು ಸುರತ್ಕಲ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರರಾದ ರಾಜೇಶ್, ಹೊನ್ನಕಟ್ಟೆ, ಕುಳಾಯಿ ಎಂಬವರು ಹೊಸಬೆಟ್ಟು ಸುರತ್ಕಲ್ ನಲ್ಲಿ RV Enterprises ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು ವಾಟ್ಸಾಪ್ ಗ್ರೂಪ್ ಗಳಲ್ಲಿ ಯಾರೋ ದುಷ್ಕರ್ಮಿಗಳು ಹಿಂದೂ ಜನರಲ್ಲಿ ರಾಜೇಶ್ ಅವರ ಬಗ್ಗೆ ಕೋಮು ದ್ವೇಷ ಹರಡಿಸುವ ಪ್ರಯತ್ನಪಟ್ಟಿದ್ದು ರಾಜೇಶ್ ಅವರು ಸುಮಾರು 20 ಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿರುತ್ತಾರೆ . ಅಲ್ಲದೇ ರಾಜೇಶ್ ಬ್ಲೂ ಫಿಲಂ ಸಿಡಿ ಮಾರಾಟ ಮಾಡಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಅಲ್ಲದೇ ಅವರ ಕಚೇರಿಯಲ್ಲಿರುವ ಯುವತಿಯರನ್ನು ಮತಾಂತರ ಮಾಡಿರುತ್ತಾರೆ ಹಾಗೂ 24 ವರ್ಷ ಪ್ರಾಯದ ಹಿಂದೂ ಯುವತಿಯನ್ನು ರಾಜೇಶ್ ತನ್ನ ತಮ್ಮನಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ. ಅಲ್ಲದೇ ಆ ಹಿಂದೂ ಯುವತಿ ಹಣೆಗೆ ಕುಂಕುಮ ಹಾಕುವುದನ್ನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿರುತ್ತಾಳೆ. ಬದಲಿಗೆ ಚರ್ಚ್ ಗೆ ಪ್ರಾರ್ಥನೆಗೆ ತಪ್ಪದೇ ಹಾಜರಾಗುತ್ತಿರುತ್ತಾಳೆ ಎಂದು ರಾಜೇಶ್ ಅವರ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪವನ್ನು ಮಾಡಿ ರಾಜೇಶ್ ಅವ ರ ವಿರುದ್ದ ಕೋಮುದ್ವೇಷ ಸಂದೇಶಗಳನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಟ್ಟ ಆರೋಪಿಗಳ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ದೂರು ನೀಡಿದ್ದರು. ಅದರಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


