Saturday, June 6, 2026
Homeಕರಾವಳಿಬಂಟ್ವಾಳ: ಅಟೋರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ; ನಾಲ್ವರಿಗೆ ಗಾಯ

ಬಂಟ್ವಾಳ: ಅಟೋರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ; ನಾಲ್ವರಿಗೆ ಗಾಯ

- Advertisement -
- Advertisement -

ಬಂಟ್ವಾಳ: ಅಟೋರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ, ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಂಡಾರಿ ಬೆಟ್ಟು ಎಂಬಲ್ಲಿ ನಡೆದಿದೆ.

ರಿಕ್ಷಾ ಚಾಲಕ ಬಂಟ್ವಾಳ ನಾವೂರ ನಿವಾಸಿ ತಾರನಾಥ, ಪ್ರಯಾಣಿಕ ಶಂಕರ ಹಾಗೂ ಬೈಕ್ ಸವಾರ ಬೆಳ್ತಂಗಡಿ ಉಜಿರೆ ನಿವಾಸಿ ಜೊಸ್ಟಿಲಿನ್ ಡಿ.ಸೋಜ, ಸಹಸವಾರ ರಶ್ಮಿತ್ ಈ ನಾಲ್ವರು ಗಾಯಗೊಂಡಿದ್ದಾರೆ.

ಇಂದು ಮೇ. 30 ರಂದು ಮಧ್ಯಾಹ್ನದ ಸಮಯದಲ್ಲಿ ಬಂಟ್ವಾಳದ ಭಂಡಾರಿಬೆಟ್ಟು ಎಂಬಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಸವಾರ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ವೇಳೆ ಭಂಡಾರಿಬೆಟ್ಟು ಎಂಬಲ್ಲಿ ಬಿಸಿರೋಡಿನಿಂದ ಬಂಟ್ವಾಳ ಕಡೆಗೆ ಹೋಗುವ ಸಂದರ್ಭದಲ್ಲಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ರಿಕ್ಷಾ ಹಾಗೂ ಬೈಕ್ ಎರಡು ವಾಹನಗಳು ಜಖಂಗೊಂಡಿದೆ. ಹಾಗೂ ಎರಡು ವಾಹನಗಳ ಚಾಲಕರಿಗೆ ಗಂಭೀರವಾದ ಗಾಯವಾಗಿದ್ದು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

- Advertisement -

Latest News

error: Content is protected !!