Wednesday, June 24, 2026
Homeಕರಾವಳಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್ ನಲ್ಲಿ ಆಕಸ್ಮಿಕ ಬೆಂಕಿ; ಚಾಲಕ ಅಪಾಯದಿಂದ ಪಾರು

ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್ ನಲ್ಲಿ ಆಕಸ್ಮಿಕ ಬೆಂಕಿ; ಚಾಲಕ ಅಪಾಯದಿಂದ ಪಾರು

- Advertisement -
- Advertisement -

ಮೂಡಬಿದಿರೆ: ಮೂಲ್ಕಿ ಪೇಟೆಯಿಂದ ಸ್ವಲ್ಪ ದೂರದಲ್ಲಿರುವ ಪ್ರಸಿದ್ಧ ಬಪ್ಪನಾಡು ಕ್ಷೇತ್ರದ ಹತ್ತಿರದ ಸೇತುವೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ನಲ್ಲಿ ಭಾನುವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಯಿತು.

ಮಂಗಳೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ನ ಕೆಎ19 ಎಎ 6062 ವಾಹನ ಇದಾಗಿದ್ದು, ವಾಹನದಲ್ಲಿದ್ದ ಚಾಲಕ ಬೆಂಕಿ ಕಾಣಿಸಿಕೊಂಡ ತಕ್ಷಣ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ‌ ಎನ್ನಲಾಗಿದೆ.

ಬೆಂಕಿ ಅವಘಡದ ವಿಚಾರ ತಿಳಿದು ಧಾವಿಸಿ ಬಂದ ಸ್ಥಳೀಯರು ಹತ್ತಿರದ ಟೋಲ್ ಗೇಟ್‌ನ ರಕ್ಷಣಾ ಸಿಬ್ಬಂದಿಯ ನೆರವು ಪಡೆದು ಬೆಂಕಿಯನ್ನು ನಿಯಂತ್ರಿಸಿದರು.‌ ನಂತರದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬಂದು ಸಂಪೂರ್ಣ ಹತೋಟಿಗೆ ತಂದರು.

ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂದು ತಿಳಿದು ಬಂದಿಲ್ಲ.

- Advertisement -

Latest News

error: Content is protected !!