Sunday, June 28, 2026
Homeಕರಾವಳಿಮಂಜೇಶ್ವರ : ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಬೈಕ್; ಇಬ್ಬರು ಸವಾರರ ಸಾವು!

ಮಂಜೇಶ್ವರ : ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಬೈಕ್; ಇಬ್ಬರು ಸವಾರರ ಸಾವು!

- Advertisement -
- Advertisement -

ಮಂಜೇಶ್ವರ : ಕುದ್ರೋಳಿ ದಸರಾ ವಿಸರ್ಜನೆ ವೀಕ್ಷಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಸವಾರರಿಬ್ಬರು ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ನಿನ್ನೆ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕೆ.ಸಿ.ರೋಡ್ ಬಳಿಯ ಉಚ್ಚಿಲ ಕಿರು ಸೇತುವೆಯಲ್ಲಿ ನಡೆದಿದೆ.

ಕುಂಬಳೆ ಕುಂಟಗೇರಡ್ಕದ ನಿವಾಸಿಯಾದ ಕೆ.ಪ್ರಜಿತ್(23) ಮತ್ತು ಕೃಷ್ಣ ಪ್ರಸಾದ್ (25) ಮೃತರು ಎಂದು ಗುರುತಿಸಲಾಗಿದೆ. ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಕೆ.ಸಿ. ರೋಡ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!