Friday, June 5, 2026
Homeಕರಾವಳಿಬೆಳ್ತಂಗಡಿ : ಶಕ್ತಿನಗರ ಸರ್ಕಲ್ ನಲ್ಲಿ ನಿಲ್ಲಿಸಿದ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿ:ಬೈಕ್ ನಲ್ಲಿದ್ದ ಓರ್ವ...

ಬೆಳ್ತಂಗಡಿ : ಶಕ್ತಿನಗರ ಸರ್ಕಲ್ ನಲ್ಲಿ ನಿಲ್ಲಿಸಿದ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿ:ಬೈಕ್ ನಲ್ಲಿದ್ದ ಓರ್ವ ಸಾವು; ಮತ್ತೊರ್ವ ಗಂಭೀರ

- Advertisement -
- Advertisement -

ಬೆಳ್ತಂಗಡಿ : ನಿಲ್ಲಿಸಿದ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು. ಬೈಕ್ ನಲ್ಲಿದ್ದ ಓರ್ವ ಸಾವನ್ನಪ್ಪಿ , ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯ ಶಕ್ತಿನಗರದ ಸರ್ಕಲ್ ಬಳಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಸರ್ಕಲ್ ಬಳಿ ಪಾರ್ಕ್ ಮಾಡಿ ನಿಲ್ಲಿಸಿದ ಕಂಟೈನರ್ ಲಾರಿಗೆ ಬೈಕ್ ಹೋಗಿ ಡಿಕ್ಕಿ ಹೊಡೆದಿದ್ದು ಬೈಕ್ ನಲ್ಲಿದ್ದ ಓರ್ವ ಸಾವನ್ನಪ್ಪಿದ್ದು ,ಮತ್ತೊರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೈಕ್ ನಲ್ಲಿದ್ದ ಇಬ್ಬರ ಬಗ್ಗೆ ಯಾವುದೇ ವಿಳಾಸ ಪತ್ತೆಯಾಗಿಲ್ಲ. ವಿಳಾಸಕ್ಕಾಗಿ ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸಾವನ್ನಪ್ಪಿದವನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಮತ್ತೊಬ್ಬನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಅಪಘಾತ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!