Wednesday, June 24, 2026
Homeಕರಾವಳಿಉಡುಪಿಉಡುಪಿ: ಮದ್ಯದ ಅಮಲಿನಲ್ಲಿ ಯರ್ರಾಬಿರ್ರಿ ಸರ್ಕಾರಿ ವಾಹನ ಚಲಾಯಿಸಿ ಅಪಘಾತವೆಸಗಿದ ಪೊಲೀಸ್ ಪೇದೆ

ಉಡುಪಿ: ಮದ್ಯದ ಅಮಲಿನಲ್ಲಿ ಯರ್ರಾಬಿರ್ರಿ ಸರ್ಕಾರಿ ವಾಹನ ಚಲಾಯಿಸಿ ಅಪಘಾತವೆಸಗಿದ ಪೊಲೀಸ್ ಪೇದೆ

- Advertisement -
- Advertisement -

ಉಡುಪಿ: ಮದ್ಯ ಸೇವನೆಯ ಮತ್ತಿನಲ್ಲಿ ಪೋಲಿಸ್ ಪೇದೆಯೊಬ್ಬ ಯರ್ರಾಬಿರ್ರಿಯಾಗಿ ಸರ್ಕಾರಿ ವಾಹನ ಚಲಾಯಿಸಿ ಅಘಾತವೆಸಗಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ‌ ಉಡುಪಿ ಡಿಎಆರ್ ವಿಭಾಗದ ಪ್ರಶಾಂತ್ ಎಂಬ ಪೊಲೀಸ್ ಪೇದೆ ಅಪಘಾತ ನಡೆಸಿದ್ದಾನೆ.

ಪೊಲೀಸ್ ಇಲಾಖೆಗೆ ಸೇರಿದ ಟ್ರಾವೆಲರ್ ಚಲಾಯಿಸಿ ಆಟೋ ಮತ್ತು ಬೈಕ್ ಸಹಿತ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪೇದೆ ಪ್ರಶಾಂತ್ ಅಪಘಾತ ಎಸಗಿದ್ದಾನೆ.

ಡಿಎಆರ್ ಪೊಲೀಸ್ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಕಾರ್ಯಕ್ರಮದ ನಿಮಿತ್ತ ಬಂದೋಬಸ್ತಿಗಾಗಿ ಗಂಗೊಳ್ಳಿಗೆ ಆಗಮಿಸಿದ್ದ ಎನ್ನಲಾಗಿದೆ.ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

- Advertisement -

Latest News

error: Content is protected !!